ಒಂದೇ ಟ್ವೀಟ್’ನಿಂದ 65 ಕೆಜಿ ತೂಕ ಕಳೆದುಕೊಂಡ ಪೊಲೀಸ್
ಮುಂಬೈ : ಮಧ್ಯ ಪ್ರದೇಶದ ಪೊಲೀಸ್ ಓರ್ವರು ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡು ಬರೋಬ್ಬರಿ 65 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಲೇಖಕಿ ಶೋಭಾ ಡೇ ಟ್ವೀಟ್ ಮಾಡಿದ್ದರು. ಇವರ ಫೊಟೊವನ್ನು ಹಾಕಿ ಮುಂಬೈನಲ್ಲಿ ಹೆವಿ ಪೊಲೀಸ್ ಬಂದೋಬಸ್ತ್ ಎಂದು ಹಾಕಿದ್ದರು.
ಈ ಟ್ವೀಟ್ ಇವರ ಜೀವನವನ್ನೇ ಬದಲಾಯಿಸಿದೆ. ಮುಂಬೈನ ಸೈಫಿ ಆಸ್ಪತ್ರೆ ಇವರಿಗೆ ಉಚಿತವಾಗಿ ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿದೆ. ಇನ್ಸ್’ಪೆಕ್ಟರ್ ದೌಲತ್ ರಾಮ್ ಜಗಾವತ್ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಒಂದೇ ಒಂದು ರು. ಖರ್ಚು ಮಾಡದೇ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯವಂತರಾಗಿದ್ದಾರೆ.
ಬರೋಬ್ಬರು 180 ಕೆಜಿ ಇದ್ದ ಪೊಲೀಸ್ ಇದೀಗ ಚಿಕಿತ್ಸೆಯಿಂದ 65 ತೂಕವನ್ನು ಕಳೆದುಕೊಂಡಿದ್ದಾರೆ. ಶೋಭಾ ಡೇ ಅವರ ದೇ ಒಂದು ಟ್ವೀಟ್ ತಮ್ಮ ಜೀವನವನ್ನೇ ಬದಲಾಯಿಸಿದ್ದಾಗಿ ದೌಲತ್ ರಾಮ್ ಹೇಳಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಶೋಭಾ ಡೇ ಅವರಿಗೆ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದ್ದಾರೆ.
Heavy police bandobast in Mumbai today! pic.twitter.com/sY0H3xzXl3
— Shobhaa De (@DeShobhaa) February 21, 2017

Last Updated 11, Apr 2018, 12:57 PM IST