ಸಂಸದೆಯಾಗಿ ಆಯ್ಕೆಯಾಗಿರುವ ನಟಿ ಮಣಿಯರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಮದುವೆಯಲ್ಲಿ ಬ್ಯುಸಿಯಾಗಿದ್ದ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಪ್ರಮಾಣ ತೆಗೆದುಕೊಂಡರು.
ನವದೆಹಲಿ[ಜೂ. 25] ಸಂಸದೆಯಾಗಿ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಬೆನ್ನಲ್ಲೇ ಹಸೆಮಣೆ ಏರಿದ್ದ ನಟಿ-ರಾಜಕಾರಣಿ ನುಸ್ರತ್ ಜಹಾನ್ ಮಂಗಳವಾರ ಪ್ರಮಾಣ ಸಂಸದೆಯಾಗಿ ವಚನ ಸ್ವೀಕರಿಸಿದರು.
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಿಂದ ಸಂಸದೆಯಾಗಿ ಚುನಾಯಿತರಾಗಿರುವ ನುಸ್ರತ್ ಜಹಾನ್ ಕಳೆದ ಬುಧವಾರವಷ್ಟೇ ತಮ್ಮ ದೀರ್ಘ ಕಾಲದ ಗೆಳೆಯ, ಕೋಲ್ಕತಾ ಮೂಲದ ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದರು. ಟಿಎಂಸಿಯಿಂದ ಆಯ್ಕೆಯಾದ ನುಸ್ರತ್ ಮತ್ತು ಅವರ ಗೆಳತಿ ಮಿಮಿ ಚಕ್ರವರ್ತಿ ಸಹ ಪ್ರಮಾಣ ತೆಗೆದುಕೊಂಡರು.
ಬೆಂಗಾಲಿ ಬೆಡಗಿ ಸಂಸದೆಯ ಪೋಟೋ ಗ್ಯಾಲರಿ
ಸಂಸತ್ ಎದುರು ನಿಂತು ಪೋಸ್ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಇಬ್ಬರೂ ಪ್ರಮಾಣದ ದಿನ ಪಕ್ಕಾ ರಾಜಕಾರಣಿಯಂತೆ ಕಂಡುಬಂದರು. ನುಸ್ರತ್ ಜಹಾನ್ ಅವರು ಎಲ್ಲ ಸಂಸದರಿಗೂ 'ಅಸ್ ಸಲಾಮು ಅಲಾಯ್ಕುಮ್, ನಮಸ್ಕಾರ್' ಎಂದು ಹೇಳಿದರು. ಬಳಿಕ ಬಂಗಾಳಿ ಭಾಷೆಯಲ್ಲಿ ಪ್ರಮಾಣ ತೆಗೆದುಕೊಂಡರು. ಮಿಮಿ ಸಹ ಬೆಂಗಾಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದದರು. ತಮ್ಮ ಮಾತಿನ ಕೊನೆಯಲ್ಲಿ 'ಜೈ ಬಾಂಗ್ಲಾ, ಜೈ ಭಾರತ್, ವಂದೇ ಮಾತರಂ' ಎಂದರು.
