Asianet Suvarna News Asianet Suvarna News

ಕಡೆಗೂ ಗೊಲ್ಲರಹಟ್ಟಿಗೆ ದಲಿತ ಸಂಸದ ಪ್ರವೇಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ನಾರಾಯಣ ಸ್ವಾಮಿಗೆ ದಲಿತ ಎನ್ನುವ ಕಾರಣಕ್ಕೆ ಗ್ರಾಮದೊಳಗೆ ಪ್ರವೇಶ ನಿರಾಕರಿಸಿದ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ವಿವಿಧ ಸಂಘಟನೆಗಳು, ಸಮುದಾಯದ ಮುಖಂಡರು ಮಠಾಧೀಶರು ಗೊಲ್ಲರಹಟ್ಟಿಗೆ ಆಗಮಿಸಿ ಜಾಗೃತಿ ಮೂಡಿಸಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ನಡೆದ ಸಾಮರಸ್ಯ ನಡೆ ಸಮಾರಂಭದಲ್ಲಿ ಗ್ರಾಮಸ್ಥರೇ ನಾರಾಯಣಸ್ವಾಮಿ ಅವರನ್ನು ಸ್ವಾಗತಿಸಿ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.

MP Narayana Swamy enters to Tumkuru Pavagada taluk Gollarahatti
Author
Bengaluru, First Published Sep 24, 2019, 10:38 AM IST

ತುಮಕೂರು (ಸೆ. 24):  ದಲಿತ ಸಮುದಾಯ ಸಂಸದ ನಾರಾಯಣಸ್ವಾಮಿ ಅವರು ಪೆಮ್ಮನಹಳ್ಳಿ ಗೊಲ್ಲರಹಟ್ಟಿಪ್ರವೇಶ ಮಾಡುವ ಮೂಲಕ ಹೊಸ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ. ಸೆಪ್ಟೆಂಬರ್‌ 16ರಂದು ನಾರಾಯಣಸ್ವಾಮಿ ಅವರು ಪಾವಗಡ ತಾಲೂಕು ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಪ್ರವೇಶ ಹೋದಾಗ ಅವರಿಗೆ ಪ್ರವೇಶ ನಿರಾಕರಿಸಲಾಯಿತು.

ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ವಿವಿಧ ಸಂಘಟನೆಗಳು, ಸಮುದಾಯದ ಮುಖಂಡರು ಮಠಾಧೀಶರು ಗೊಲ್ಲರಹಟ್ಟಿಗೆ ಆಗಮಿಸಿ ಜಾಗೃತಿ ಮೂಡಿಸಿದ ಬೆನ್ನಲ್ಲೇ ಸೋಮವಾರ ಗೊಲ್ಲರಹಟ್ಟಿಯಲ್ಲಿ ಸೋಮವಾರ ನಡೆದ ಸಾಮರಸ್ಯ ನಡೆ ಸಮಾರಂಭದಲ್ಲಿ ಗ್ರಾಮಸ್ಥರೇ ನಾರಾಯಣಸ್ವಾಮಿ ಅವರನ್ನು ಸ್ವಾಗತಿಸಿ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.

ಇದೆಂಥಾ ಪದ್ಧತಿ! ದಲಿತ ಎನ್ನುವ ಕಾರಣಕ್ಕೆ ಊರಿನೊಳಗೆ ಬರದಂತೆ ತಡೆದ ಗ್ರಾಮಸ್ಥರು!

ಸಂಸದರ ಗೊಲ್ಲರಹಟ್ಟಿಪ್ರವೇಶ ಹಿನ್ನೆಲೆ ಇಡೀ ಊರೇ ತಳಿರು ತೋರಣಗಳಿಂದ ಅಲಂಕೃತಗೊಂಡಿತ್ತು. ಇಡೀ ಹಟ್ಟಿಯಲ್ಲಿ ಹಬ್ಬದ ವಾತಾವರಣ ಇತ್ತು. ಹೂವಿತ್ತು. ಹೃದಯಸ್ಪರ್ಶಿಯಾಗಿ ಸಂಸದರನ್ನು ಹಟ್ಟಿಪ್ರವೇಶ ಮಾಡಿಸುವ ಮೂಲಕ ಅಂದು ದಲಿತರಿಗೆ ಪ್ರವೇಶ ನಿರಾಕರಿಸಿ ಸದ್ದು ಮಾಡಿದ ಗೊಲ್ಲರಹಟ್ಟಿಜನ ಇಂದು ಬದಲಾವಣೆ ಪರ್ವದ ಮೂಲಕ ಸುದ್ದಿಯಾಗಿದ್ದಾರೆ.

ಊರ ದೇವಾಲಯದ ಮುಂಭಾಗ ಪುನಃ ಪುರಪ್ರವೇಶ ಹಾಗೂ ಸಾಮರಸ್ಯದ ನಡೆದ ಕಾರ್ಯಕ್ರಮ ಏರ್ಪಡಿಸಿ, ಸಂಸದ ನಾರಾಯಣಸ್ವಾಮಿ ಅವರನ್ನು ಊರಿನ ಮಹಿಳೆಯರು ಪೂರ್ಣಕುಂಭ ಮೂಲಕ ಸ್ವಾಗತಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ.

ಈಶ್ವರಾನಂದಪುರಿ ಸ್ವಾಮೀಜಿ, ಶ್ರೀಕೃಷ್ಣಯಾದವನಂದ ಸ್ವಾಮೀಜಿ, ಡಾ.ಶಾಂತವೀರಸ್ವಾಮೀಜಿ, ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮೀಜಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿದಂತೆ ಅನೇಕರು ಸೋಮವಾರದ ಸಭೆಗೆ ಸಾಕ್ಷಿಯಾದರು.

ತುಮಕೂರು: ಅವಾಂತರ ಸೃಸ್ಟಿಸ್ತಿದೆ ಸ್ಮಾರ್ಟ್ ಸಿಟಿ ಕಾಮಗಾರಿ, ಆಕ್ರೋಶ

ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಸಂಸದ ನಾರಾಯಣಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಅಂದಿನ ಘಟನೆ ಉದ್ದೇಶ ಪೂರ್ವಕವಾದದ್ದಲ್ಲ, ಯಾರೂ ಇಲ್ಲಿ ಬರಲೇ ಬಾರದು ಅಂತಾ ಹಠ, ದೌರ್ಜನ್ಯ ಮಾಡಲೇ ಇಲ್ಲ ಅಂತಾ ಸ್ಪಷ್ಟಪಡಿಸಿದರು. ಅನೇಕರು ಕಂದಚಾರಗಳನ್ನು ಮಾಡುತ್ತಾರೆ. ಕೆಲ ಗ್ರಾಮಗಳು ಸರ್ಕಾರವನ್ನು ನೋಡಿರಲಿಲ್ಲ, ಅಂತಹ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೆ ಎಂದರು.

ಹಟ್ಟಿಯ ದೇವಸ್ಥಾನದ ಎದುರು ನಿರ್ಮಾಣವಾದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆ ಮೇಲೆ ನಾರಾಯಣಸ್ವಾಮಿಗೆ ಗೊಲ್ಲರಹಟ್ಟಿನಿವಾಸಿಗಳು ಹಾಗೂ ಪೂಜಾರಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಯಾದವ ಸಮುದಾಯದ ಮುಖಂಡರು ಭಾಗಿಯಾಗಿದ್ದು, ಎಲ್ಲಾ ಸಮುದಾಯದ ಶ್ರೀಗಳ ಭಾಷಣದ ಮೂಲಕ ಗೊಲ್ಲರಹಟ್ಟಿಯ ಬದಲಾವಣೆಗೆ ನಾಂದಿ ಹಾಡಿದರು. ಬದಲಾವಣೆಯೇ ಜಗದ ನಿಯಮದಂತೆ, ಇಂದಿನ ಸಾಮರಸ್ಯದ ನಡೆ ಕಾರ್ಯಕ್ರಮ ಗೊಲ್ಲ ಸಮುದಾಯದ ಅನೇಕರ ಮನಃ ಪರಿವರ್ತನೆಗೆ ಸಾಕ್ಷಿಯಾದಂತಿತ್ತು.

ಎಲ್ಲಾ ವರ್ಗದ ಸಮುದಾಯಗಳ ಅಭವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ ಸಂಸದ ನಾರಾಯಣಸ್ವಾಮೀ ಅವರಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಅವರು ಯಾದವ ಸಮುದಾಯದ ಮೂಲ ಸಮಸ್ಯೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

Follow Us:
Download App:
  • android
  • ios