ಸಿದ್ದರಾಮಯ್ಯ ಎನ್ನುವ ಮಾರಿಯನ್ನು ಓಡಿಸಿ ಬಿಜೆಪಿ ಅಸ್ತಿತ್ವಕ್ಕೆ ಬರಲಿದೆ: ನಳೀನ್ ಕುಮಾರ್

MP Nalen Kumar Katel Slams CM Siddaramaiah
Highlights

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕ. ಸಿಎಂ ಭಯವನ್ನು ಉತ್ಪಾದನೆ ಮಾಡುತ್ತಿದ್ದಾರೆ.   ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಆದ್ರೂ ಸುಮ್ಮನಿದ್ದಾರೆ ಎಂದು ಸುರಕ್ಷಾ ಸಮಾವೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಮಾ. 05): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕ. ಸಿಎಂ ಭಯವನ್ನು ಉತ್ಪಾದನೆ ಮಾಡುತ್ತಿದ್ದಾರೆ.   ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಆದ್ರೂ ಸುಮ್ಮನಿದ್ದಾರೆ ಎಂದು ಸುರಕ್ಷಾ ಸಮಾವೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಅಲ್ಪಸಂಖ್ಯಾಕರ ತುಷ್ಟೀಕರಣ ಮೂಲಕ ರಾಜಕೀಯ ಮಾಡ್ತಿರೋ ಸಿದ್ದರಾಮಯ್ಯ ಭಯೋತ್ಪಾದಕ ಅಲ್ಲದೇ ಇನ್ನೇನು? ತುಳುನಾಡಿನಲ್ಲಿ ಮಾರಿ ಓಡಿಸುವ ಒಂದು ಸಂಪ್ರದಾಯಿಕ ಹಬ್ಬವಿದೆ.  ಅದರಂತೆ ಇಂದು ಜಿಲ್ಲೆಯಲ್ಲಿ ಮೂರು ಮಾರಿಗಳನ್ನು ಓಡಿಸಲು ಯಾತ್ರೆ ಸಾಗಿದೆ.  ಒಂದು ಕಾಂಗ್ರೆಸ್ ಮಾರಿ, ಇನ್ನೊಂದು ಸಿದ್ದರಾಮಯ್ಯ ಎನ್ನುವ ಮಾರಿ ಮತ್ತೊಂದು ಬಂಟ್ವಾಳದ ಶಾಸಕ ರಮಾನಾಥ್ ರೈ ಎಂಬ ಮಾರಿ.  ಈ ಮೂರು ಮಾರಿಗಳನ್ನ ಕೇರಳಕ್ಕೆ ಓಡಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ನಳೀನ್ ಕುಮಾರ್ ವಿಡಂಬನೆ ಮಾಡಿದ್ದಾರೆ. 

ರಾಜ್ಯದಲ್ಲಿ ಇಬ್ಬರು ಸುಲ್ತಾನರಿದ್ದಾರೆ. ಒಬ್ಬ ಸಿದ್ದು ಸುಲ್ತಾನ್ ಇನ್ನೊಬ್ಬ ರಮಾನಾಥ್ ರೈ.  ಬಿಹಾರದ ಬಳಿಕ ಕರ್ನಾಟಕ ಜಂಗಲ್ ರಾಜ್ಯವಾಗಿದೆ.  ಜಂಗಲ್ ರಾಜ್ಯ ಮಾಡಿದ ಲಾಲು ಪ್ರಸಾದ್ ಜೈಲಿನೊಳಗಡೆ ಇದ್ದಾರೆ. ಬರುವ ವರ್ಷ ಸಿದ್ದರಾಮಯ್ಯ ಕೂಡಾ  ಜೈಲಲ್ಲಿರುತ್ತಾರೆ. ದತ್ತಪೀಠವನ್ನ ಇಸ್ಲಾಮೀಕರಣ ಮಾಡುವ ಷಡ್ಯಂತ್ರಕ್ಕೂ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಇದು ನಿಮ್ಮ ಕೊನೆಯ ಅವತಾರ.ಇನ್ನು ಮೂರು ತಿಂಗಳಲ್ಲಿ ಕಾಂಗ್ರೆಸ್ ಅಂತ್ಯ ಸಂಸ್ಕಾರವಾಗುತ್ತೆ ಎಂದು ಟೀಕಿಸಿದ್ದಾರೆ. 
 

loader