ಕುಡಿದ ಅಮಲಿನಲ್ಲಿ ಎರಡು ವರ್ಷದ ಹೆತ್ತ ಮಗುವನ್ನೇ ಈ ತಾಯಿ ಬೆಂಕಿಗೆ ಎಸೆದಿದ್ದಾಳೆ. ತನ್ನ ಗಂಡನನ್ನು ಬಿಟ್ಟು ಒಂಟಿಯಾಗಿದ್ದ ಮಗುವಿನ ತಾಯಿ ದಿನವಿಡೀ ಕುಡಿದ ನಶೆಯಲ್ಲಿರುತ್ತಿದ್ದಳು. ಈ ಸಂದರ್ಭದಲ್ಲಿ ತನ್ನ ಮಗುವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಳು. ನಿನ್ನೆ ರಾತ್ರಿ ಚಳಿ ಹೆಚ್ಚಾಗಿದ್ದರಿಂದ ಚಳಿ ಕಾಯಿಸಿಕೊಳ್ಳಲು ಬೆಂಕಿ ಹಚ್ಚಿದ್ದಳು. ಈ ವೇಳೆ ಕೈಯ್ಯಲ್ಲಿದ್ದ ಮಗುವನ್ನು ಬೆಂಕಿಗೆಸೆದಿದ್ದು, ಮಗುವಿನ ಮುಖ ಹಾಗೂ ದೇಹದಲ್ಲೆಡೆ ಸುಟ್ಟ ಗಾಯಗಳಾಗಿವೆ.
ಮೈಸೂರು(ಜ.19): ತಾಯಿಯೊಬ್ಬಳು ತನ್ನ ಮಗುವನ್ನು ಬೆಂಕಿಗೆ ಎಸೆದ ಅಮಾನುಷ ಕೃತ್ಯ ಮೈಸೂರಿನ ಹೆಚ್'ಡಿ ಕೋಟೆ ತಾಲೂಕಿನ ಚಿಕ್ಕೇರಿಹಾಡಿಯಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಎರಡು ವರ್ಷದ ಹೆತ್ತ ಮಗುವನ್ನೇ ಈ ತಾಯಿ ಬೆಂಕಿಗೆ ಎಸೆದಿದ್ದಾಳೆ. ತನ್ನ ಗಂಡನನ್ನು ಬಿಟ್ಟು ಒಂಟಿಯಾಗಿದ್ದ ಮಗುವಿನ ತಾಯಿ ದಿನವಿಡೀ ಕುಡಿದ ನಶೆಯಲ್ಲಿರುತ್ತಿದ್ದಳು. ಈ ಸಂದರ್ಭದಲ್ಲಿ ತನ್ನ ಮಗುವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಳು. ನಿನ್ನೆ ರಾತ್ರಿ ಚಳಿ ಹೆಚ್ಚಾಗಿದ್ದರಿಂದ ಚಳಿ ಕಾಯಿಸಿಕೊಳ್ಳಲು ಬೆಂಕಿ ಹಚ್ಚಿದ್ದಳು. ಈ ವೇಳೆ ಕೈಯ್ಯಲ್ಲಿದ್ದ ಮಗುವನ್ನು ಬೆಂಕಿಗೆಸೆದಿದ್ದು, ಮಗುವಿನ ಮುಖ ಹಾಗೂ ದೇಹದಲ್ಲೆಡೆ ಸುಟ್ಟ ಗಾಯಗಳಾಗಿವೆ.
ಘಟನೆ ಸಂಭವಿಸಿ 5 ತಾಸಾದರೂ ಮಗುವಿಗೆ ಚಿಕಿತ್ಸೆ ನೀಡಿರದ ಕಾರಣ ಸ್ಥಳಕ್ಕಾಗಮಿಸಿದ ಅಂಗನವಾಡಿ ಕಾರ್ಯಕರ್ತರು ಆಕೆಗೆ ಹಣ ನೀಡಿ ಮನವೊಲಿಸಿ ಮಗುವನ್ನು ರಕ್ಷಿಸಿದ್ದಲ್ಲದೆ ಆಸ್ಪತ್ರೆಗೆ ದಾಖಲಿಸಿದ್ದಾರೆ.