ಆಸ್ಪತ್ರೆಯಲ್ಲಿರುವ ತನ್ನ ತಾಯಿಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ 7 ವರ್ಷದ ಮಗುವೊಂದು ಭಿಕ್ಷಾಟನೆ ಮಾಡುತ್ತಿದ್ದ ಘಟನೆ ಬಿಹಾರದ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ತನ್ನ ತಾಯಿಯನ್ನು ಆಸ್ಪತ್ರೆಯಿಂದ ಕರೆತರಲು ಸಹಾಯ ಮಾಡಿ ಎಂದು ರಸ್ತೆಯಲ್ಲಿ ಮಗುವು ಭಿಕ್ಷೆ ಬೇಡುತ್ತಿದ್ದ ಬಗ್ಗೆ ವರದಿಯಾಗಿದೆ.
ಪಾಟ್ನಾ (ನ.28): ಆಸ್ಪತ್ರೆಯಲ್ಲಿರುವ ತನ್ನ ತಾಯಿಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ 7 ವರ್ಷದ ಮಗುವೊಂದು ಭಿಕ್ಷಾಟನೆ ಮಾಡುತ್ತಿದ್ದ ಘಟನೆ ಬಿಹಾರದ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ತನ್ನ ತಾಯಿಯನ್ನು ಆಸ್ಪತ್ರೆಯಿಂದ ಕರೆತರಲು ಸಹಾಯ ಮಾಡಿ ಎಂದು ರಸ್ತೆಯಲ್ಲಿ ಮಗುವು ಭಿಕ್ಷೆ ಬೇಡುತ್ತಿದ್ದ ಬಗ್ಗೆ ವರದಿಯಾಗಿದೆ. ಇತ್ತೀಚೆಗಷ್ಟೇ ಇಲ್ಲಿನ ಆಸ್ಪತ್ರೆಯಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ 7 ವರ್ಷದ ಮಗುವಿನ ತಾಯಿಯ ಚಿಕಿತ್ಸೆ ವೆಚ್ಚ ಭರಿಸುವುದು ಕಷ್ಟವಾಗಿದ್ದು, ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಮನೆಗೆ ತೆರಳಲು ಅನುವು ಮಾಡಿಕೊಡುತ್ತಿಲ್ಲ. ಆಕೆಯ ಆಸ್ಪತ್ರೆ ಬಿಲ್ ಬರೋಬ್ಬರಿ 70 ಸಾವಿರವಾಗಿದ್ದು, ಕುಟುಂಬವು ಈ ಪ್ರಮಾಣದಲ್ಲಿ ಹಣವನ್ನು ನೀಡುವಷ್ಟು ಸಶಕ್ತವಾಗಿಲ್ಲ.
ಮೊದಲಿಗೆ ಆಕೆಗೆ ವಿವಿಧ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಿದ್ದಕ್ಕಾಗಿ 1.5 ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಮನವಿ ಮಾಡಿಕೊಂಡ ಹಿನ್ನೆಲೆ ಇದೀಗ ಬಿಲ್ ಮೊತ್ತವನ್ನು ಕೊಂಚ ಮಟ್ಟದಲ್ಲಿ ಮಾತ್ರವೇ ಇಳಿಸಿದೆ. ಆದ್ದರಿಂದ ಹಣವನ್ನು ಹೊಂದಿಸಲು ದಿಕ್ಕು ತೋಚದೇ ತನ್ನ ತಾಯಿಯನ್ನು ಆಸ್ಪತ್ರೆಯಿಂದ ಕರೆತರಲು ಮಗುವು ಭಿಕ್ಷಾಟನೆ ಮಾಡುತ್ತಿದೆ.
