ನವದೆಹಲಿ[ಮೇ. 30]  ತಾಯಿ-ಮಗನ ನಡುವಿನ ಪ್ರೀತಿ, ಬಾಂಧವ್ಯಗಳೆ ಅಂತಹದು.. ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಬಿಡಿ. 17 ನೇ ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೋದಿ ದೆಹಲಿಯಲ್ಲಿ ಪ್ರಮಾಣ ತೆಗೆದುಕೊಂಡರೆ ತಾಯಿ ಮನೆಯಲ್ಲೆ ಕುಳಿತು ಪುತ್ರನ ಪದಗ್ರಹಣ ವೀಕ್ಷಿಸಿದರು.

ಸೋಶಿಯಲ್ ಮೀಡಿಯಾ ಸಹ ಅಷ್ಟೆ ವೇಗವಾಗಿ ಈ ಪೋಟೋಕ್ಕೆ ಪ್ರತಿಕ್ರಿಯೆ ನೀಡಿದ್ದು ಕೆಲವೇ ಕ್ಷಣದಲ್ಲಿ ಲಕ್ಷಾಂತರ ಶೇರ್ ಆಗಿದೆ ಮತ್ತು ಆಗುತ್ತಿದೆ.

ಮತ್ತೆ ನರೇಂದ್ರ ಮೋದಿ! 15ನೇ ಪ್ರಧಾನಿಯಾಗಿ ಪ್ರಮಾಣ ವಚನ

ಮೇ. 23 ರಂದು ಅಭೂತಪೂರ್ವ ಗೆಲುವು ಕಂಡ ಮೋದಿ ಪಡೆ ಗುರುವಾರ ಸಂಜೆ ದೇಶದ ಆಡಳಿತ ಮುನ್ನಡೆಸುವ ಪ್ರಮಾಣ ತೆಗೆದುಕೊಂಡಿತು. ಕರ್ನಾಟಕದ ಸಂಸದರಾದ ಸದಾನಂದ ಗೌಡ, ಪ್ರಹ್ಲಾದ್ ಜೋಷಿ ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದಾರೆ.