ಮೂರು ತ್ರಿವಳಿ ಹೆಣ್ಣು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿರುವ ಅಪರೂಪದ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದ ಸೋಮಣ್ಣ ಎನ್ನುವರ ಪತ್ನಿ ರೇಣುಕಾ ನಿನ್ನೆಯ ನಸುಕಿನ ಜಾವ ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇನ್ನು ಆಸ್ಪತ್ರೆಯ ಹೆರಿಗೆ ತಜ್ಞ ಡಾ ಬಸವವರಾಜ ಸಜ್ಜನ್ ಈ ಹೆರಿಗೆಯನ್ನು ಮಾಡಿಸಿಕೊಂಡಿದ್ದು, ನಾರ್ಮಲ್ ಡೆಲಿವರಿಯಾಗಿದೆ.

ಕೊಪ್ಪಳ(ಅ.26): ಮೂರು ತ್ರಿವಳಿ ಹೆಣ್ಣು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿರುವ ಅಪರೂಪದ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದ ಸೋಮಣ್ಣ ಎನ್ನುವರ ಪತ್ನಿ ರೇಣುಕಾ ನಿನ್ನೆಯ ನಸುಕಿನ ಜಾವ ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇನ್ನು ಆಸ್ಪತ್ರೆಯ ಹೆರಿಗೆ ತಜ್ಞ ಡಾ ಬಸವವರಾಜ ಸಜ್ಜನ್ ಈ ಹೆರಿಗೆಯನ್ನು ಮಾಡಿಸಿಕೊಂಡಿದ್ದು, ನಾರ್ಮಲ್ ಡೆಲಿವರಿಯಾಗಿದೆ.

ಸದ್ಯ ತಾಯಿ ರೇಣುಕಾ ಆರೋಗ್ಯದಿಂದ ಇದ್ದು, ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿಡಲಾಗಿದೆ. ಇನ್ನು ಸಾಮಾನ್ಯವಾಗಿ ನವಜಾತ ಶಿಶುಗಳು ಎರಡೂವರೆ ಕೆಜಿ ತೂಕ ಹೊಂದಿರಬೇಕು. ಆದರೆ ಈ ತ್ರಿವಳಿ ಹೆಣ್ಣು ಮಕ್ಕಳು ಮಾತ್ರ ಒಂದೂವರೆ ಕೆಜಿ ತೂಕ ಹೊಂದಿದ್ದಾರೆ. ಆದರೂ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇನ್ನು ರೇಣುಕಾಗೆ ಇದು ನಾಲ್ಕನೇ ಹೆರಿಗೆಯಾಗಿದ್ದು, ಮೊದಲನೆಯದ್ದು ಹೆಣ್ಣು ಮಗು ಹುಟ್ಟಿದ ಎರಡು ವರ್ಷಗಳ ಬಳಿಕ ಮೃತಪಟ್ಟಿದೆ. ಇನ್ನು ಎರಡನೇ ಹೆರಿಗೆಯೂ ಸಹ ಹೆಣ್ಣು ಮಗು ಆಗಿದ್ದು, ಆ ಮಗುವಿಗೆ 7 ವರ್ಷವಾಗಿದೆ. ಇನ್ನು ಮೂರನೇ ಹೆರಿಗೆಯಲ್ಲೂ ಹೆಣ್ಣು ಆಗಿದ್ದು, ಆ ಮಗುವಿಗೆ 5 ವರ್ಷವಾಗಿದೆ. ಇನ್ನು ಸದ್ಯ ಆಗಿರುವ ನಾಲ್ಕನೇ ಹೆರಿಗೆಯಲ್ಲೂ ತ್ರಿವಳಿಯಾಗಿದ್ದು ಆ ಮಕ್ಕಳು ಕೂಡಾ ಹೆಣ್ಣಾಗಿವೆ. ಹೀಗಾಗಿ ರೇಣುಕಾಗೆ ಒಟ್ಟು 5 ಹೆಣ್ಣು ಮಕ್ಕಳು ಇದ್ದಂತಾಗಿದೆ.