ಚೆನ್ನೈ, [ನ.11]: ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಲವಂತವಾಗಿ ಅಪ್ರಾಪ್ತ ಮಗಳ ಮದುವೆ ಮಾಡಿಸಿರುವ ಅಮಾನವೀಯ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.

ಗಂಡನ ಸಾವಿನ ಬಳಿಕ ಯುವಕನೊಬ್ಬನ ಜತೆ ಪ್ರೇಮ ಸಂಬಂಧದಲ್ಲಿದ್ದ ಮಹಿಳೆ, ಬಲವಂತವಾಗಿ ಆತನ ಜತೆ ಅಪ್ರಾಪ್ತ ಮಗಳ ಮದುವೆ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಮಗಳನ್ನ 20 ದಿನಗಳ ಕಾಲ ಬಂಧಿಸಿಟ್ಟು, ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಳೆ. 

ಬಾಲಕಿ ತಂದೆ ಅನೇಕ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದ. ತಾಯಿ ಸ್ಥಳೀಯ ನಿವಾಸಿ ರಾಜಶೇಖರ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. 

ರಾಜಶೇಖರ್ ಮಗಳನ್ನು ಮದುವೆಯಾಗಲು ಬಯಸಿದ್ದನಂತೆ. ಈ ಸಂಗತಿಯನ್ನು ಪ್ರಿಯತಮೆಗೆ ಹೇಳಿದ್ದು, ರಾಜಶೇಖರ್ ಮದುವೆಯಾದರೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ತಾಯಿ ಮಗಳ ಮೇಲೆ ಒತ್ತಡ ಹೇರಲು ಶುರು ಮಾಡಿದ್ದಳು.

ಆದರೆ ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ. ಆದರೂ ಬಿಡದೆ ಬಾಲಕಿಯನ್ನು ಬಲವಂತವಾಗಿ ಜಶೇಖರ್ ಜೊತೆ ಬಲವಂತವಾಗಿ ಮದುವೆ ಮಾಡಿಸಿದ್ದಾಳೆ.

ಮದುವೆ ಬಳಿಕ ಹಳ್ಳಿಯೊಂದರ ಮನೆಯಲ್ಲಿ ಹುಡುಗಿಯನ್ನ ಕೂಡಿ ಹಾಕಲಾಗಿದೆ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಬಾಲಕಿ ಬಗ್ಗೆ ಪೊಲೀಸರಿಗೆ  ತಿಳಿಸಿದ್ದಾರೆ. 

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಬಾಲಕಿಯನ್ನ ರಕ್ಷಿಸಿದ್ದಾರೆ. ಆದರೆ, ಆರೋಪಿಗಳು ನಾಪತ್ತೆಯಾಗಿದ್ದಾರೆ.