ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಮದುವೆಯಾಗಿ 7 ತಿಂಗಳ ಹಸುಗೂಸಿದ್ದ ಗೃಹಿಣಿಯನ್ನೇ ಯುವತಿಯೊಬ್ಬಳು ಕರೆದುಕೊಂಡು ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಮದುವೆಯಾಗಿ 7 ತಿಂಗಳ ಹಸುಗೂಸಿದ್ದ ಗೃಹಿಣಿಯನ್ನೇ ಯುವತಿಯೊಬ್ಬಳು ಕರೆದುಕೊಂಡು ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.: ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಮದುವೆಯಾಗಿ 7 ತಿಂಗಳ ಹಸುಗೂಸಿದ್ದ ಗೃಹಿಣಿಯನ್ನೇ ಯುವತಿಯೊಬ್ಬಳು ಕರೆದುಕೊಂಡು ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್ ಗ್ರಾಮದ ಪ್ರಿಯಾ ಎಂಬ ಗೃಹಣಿಯನ್ನು ಅದೇ ಗ್ರಾಮದ ನಿಮಿಷಾಂಬ ದೇವಾಲಯದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ಮಹಾದೇವಿ ಪ್ರಿಯಾಳನ್ನು ಓಡಿಸಿಕೊಂಡು ಹೋಗಿದ್ದಾಳೆಂದು ಹೇಳಲಾಗ್ತಿದೆ.
ಪ್ರಿಯಾ ಮತ್ತು ಮಹಾದೇವಿ ಗೆಳತಿಯರಾಗಿದ್ದು, ಆಗಾಗ ಮಹಾದೇವಿ, ಪ್ರಿಯಾ ಮನೆಗೆ ಬಂದು ಹೋಗುತ್ತಿದ್ದಳು. 7 ತಿಂಗಳ ಮಗುವಿಗೆ ಹೊಸ ಬಟ್ಟೆ ತರೋದಾಗಿ ಹೇಳಿ ಮಗುವನ್ನು ಮನೆಯಲ್ಲಿಯೇ ಬಿಟ್ಟು ಮಹಾದೇವಿಯೊಂದಿಗೆ ಪರಾರಿಯಾಗಿದ್ದಾಳೆ. ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಮಗು ಬಿಟ್ಟು ಹೋಗಿರೋದ್ರಿಂದ ಪ್ರಿಯಾ ಪೋಷಕರು ಈಗ ತೀವ್ರ ಕಂಗಾಲಾಗಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಹಾದೇವಿ ವಿರುದ್ಧ ದೂರು ದಾಖಲಿಸಿದ್ದಾರೆ.
