ಎದೆಹಾಲು ಉಣಿಸುತ್ತಿರುವಾಗ ಹಾವು ಕಚ್ಚಿ ತಾಯಿ, ಮಗು ಸಾವು..!

Mother bitten by snake breastfeeds child
Highlights

ಮಲಗಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಅದರ ಪರಿವೇ ಇಲ್ಲದೇ ಮಗುವಿಗೆ ತಾಯಿಯೋರ್ವಳು ಎದೆಹಾಲು ಉಣಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.

ಲಕ್ನೋ [ಮೇ.26]: ಮಲಗಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಅದರ ಪರಿವೇ ಇಲ್ಲದೇ ಮಗುವಿಗೆ ತಾಯಿಯೋರ್ವಳು ಎದೆಹಾಲು ಉಣಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.

ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹಾವೊಂದು ತಾಯಿಯನ್ನು ಕಚ್ಚಿತ್ತು. ಆದರೆ ಇದರ ಅರಿವಿಲ್ಲದ ತಾಯಿ ತನ್ನ ಮೂರು ವರ್ಷದ ಹೆಣ್ಣು ಮಗುವಿಗೆ ಎದೆಹಾಲು ಉಣಿಸಿದ್ದಾಳೆ. ಕೆಲ ಸಮಯದ ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟರು ವೈದ್ಯರು ತಿಳಿಸಿದ್ದಾರೆ. 

ಭಾರತವು ಸುಮಾರು 300 ವಿವಿಧ ಪ್ರಜಾತಿಯ ಹಾವುಗಳ ವಾಸಸ್ಥಾನವಾಗಿದ್ದು, ಇದರಲ್ಲಿ 60 ಪ್ರಜಾತಿಯ ಹಾವುಗಳು ಅತ್ಯಂತ ವಿಷಕಾರಿ ಎಂದು ಪರಿಗಣಿಸಲ್ಪಟ್ಟಿದೆ. ವಿಶ್ವದಲ್ಲಿ ವರ್ಷವೊಂದಕ್ಕೆ 1 ಲಕ್ಷ ಜನ ಸಾವನ್ನಪ್ಪಿದರೆ ಭಾರತ ಒಂದರಲ್ಲೇ ಸುಮಾರು 46 ಸಾವಿರ ಜನ ಬಲಿಯಾಗುತ್ತಾರೆ ಎಂದು ವರದಿಯೊಂದು ತಿಳಿಸಿದೆ. 

loader