ಗಾಳಿ, ನೀರು ಹಾಗೂ ಮತ್ತಿತರೆ ಮಾಲಿನ್ಯಗಳಿಂದ ಸಾವಿಗೀಡಾಗುವ ಜನರ ಸಂಖ್ಯೆಯಲ್ಲಿ ಇಡೀ ವಿಶ್ವದಲ್ಲೇ ಭಾರತ ಪ್ರಥಮ ಸ್ಥಾನದಲ್ಲಿದ್ದು, 2015ನೇ ಸಾಲಿನಲ್ಲಿ 25 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.
ನವದೆಹಲಿ(ಅ.21): ಗಾಳಿ, ನೀರು ಹಾಗೂ ಮತ್ತಿತರೆ ಮಾಲಿನ್ಯಗಳಿಂದ ಸಾವಿಗೀಡಾಗುವ ಜನರ ಸಂಖ್ಯೆಯಲ್ಲಿ ಇಡೀ ವಿಶ್ವದಲ್ಲೇ ಭಾರತ ಪ್ರಥಮ ಸ್ಥಾನದಲ್ಲಿದ್ದು, 2015ನೇ ಸಾಲಿನಲ್ಲಿ 25 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.
ಮಾಲಿನ್ಯದಿಂದಾಗಿ ವಿಶ್ವಾದ್ಯಂತ 2015ರಲ್ಲಿ 90 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 25 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 18 ಲಕ್ಷ ಮಂದಿಯ ಸಾವಿನೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವದ ಅತ್ಯಂತ ಹಳೆಯ ಹಾಗೂ ಜನಪ್ರಿಯ ವೈದ್ಯ ಜರ್ನಲ್ ‘ದ ಲ್ಯಾನ್ಸೆಟ್’ನಲ್ಲಿ ಅಧ್ಯಯನ ವರದಿಯೊಂದು ಪ್ರಕಟವಾಗಿದೆ.
ಮಾಲಿನ್ಯದಿಂದ ಉಂಟಾಗುವ, ಸಾಂಕ್ರಾಮಿಕವಲ್ಲದ ರೋಗಗಳಾದ ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶ ಕ್ಯಾನ್ಸರ್ ಹಾಗೂ ಶ್ವಾಸಕೋಶ ಸಮಸ್ಯೆಯಿಂದಾಗಿ ಜನರು ಮೃತಪಡುತ್ತಿದ್ದಾರೆ. ಮಾಲಿನ್ಯದಿಂದ ಉಂಟಾಗುವ ಸಾವಿನಲ್ಲಿ ವಾಯುಮಾಲಿನ್ಯದ್ದೇ ಕೊಡುಗೆ ಅಧಿಕ.
2015ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 65 ಲಕ್ಷ ಸಾವು ವಿಶ್ವದಲ್ಲಿ ವಾಯುಮಾಲಿನ್ಯದಿಂದ ಉಂಟಾಗಿವೆ. ಜಲಮಾಲಿನ್ಯ ದಿಂದಾಗಿ 18 ಲಕ್ಷ ಹಾಗೂ ಉದ್ಯೋಗ ಸ್ಥಳದ ಮಾಲಿನ್ಯದಿಂದಾಗಿ 80 ಸಾವಿರ ಸಾವುಗಳು ಸಂ‘ವಿಸಿವೆ ಎಂದು ವರದಿ ಹೇಳಿದೆ.
