Asianet Suvarna News Asianet Suvarna News

ಶಬ್ದಮಾಲಿನ್ಯ ಪಾಠಕ್ಕೆ ಮಸೀದಿ ಚಿತ್ರ! ವಿವಾದ ಸೃಷ್ಟಿಸಿದ ಪಠ್ಯಪುಸ್ತಕ

ಐಸಿಎಸ್’ಇ ಪಠ್ಯಕ್ರಮದ ಆರನೇ ತರಗತಿ ವಿಜ್ಞಾನ ಪಾಠದಲ್ಲಿ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಪಾಠದಲ್ಲಿ ಮಸೀದಿ ಚಿತ್ರ ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಶಬ್ದಮಾಲಿನ್ಯದ ಕುರಿತಾದ ಪಾಠದಲ್ಲಿ ಕಾರು, ರೈಲು, ಹಾಗೂ ವಿಮಾನ ಚಿತ್ರಗಳ ಜೊತೆ ಮಸಿದಿಯ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

Mosque Shown As Noise Pollutant In Class 6 Textbook Sparks Controversy

ನವದೆಹಲಿ (ಜು.02): ಐಸಿಎಸ್’ಇ ಪಠ್ಯಕ್ರಮದ ಆರನೇ ತರಗತಿ ವಿಜ್ಞಾನ ಪಾಠದಲ್ಲಿ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಪಾಠದಲ್ಲಿ ಮಸೀದಿ ಚಿತ್ರ ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಶಬ್ದಮಾಲಿನ್ಯದ ಕುರಿತಾದ ಪಾಠದಲ್ಲಿ ಕಾರು, ರೈಲು, ಹಾಗೂ ವಿಮಾನ ಚಿತ್ರಗಳ ಜೊತೆ ಮಸಿದಿಯ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆಯಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ರಮವು ವ್ಯಾಪಕ ಟೀಕೆಗೊಳಗಾಗಿದೆ.

ಆದರೆ, ಆ ಪುಸ್ತಕವನ್ನು ತಾವು ಪ್ರಕಟಿಸಿಲ್ಲ ಅಥವಾ ಶಿಫಾರಸ್ಸು ಮಾಡಿಲ್ಲವೆಂದು ಐಸಿಎಸ್’ಇಯು ಹೇಳಿದೆ. ಪುಸ್ತಕಗಳನ್ನು ಬಳಸುವುದು ಆಯಾಯ ಶಾಲೆಗಳಿಗೆ ಬಿಟ್ಟ ವಿಚಾರವೆಂದು ಅದು ಹೇಳಿದೆ.

ಪುಸ್ತಕ ಪ್ರಕಾಶಕರು ಹಾಗೂ ಶಾಲೆಗಳು ಪಠ್ಯದಲ್ಲಿ ಯಾವುದೇ ಆಕ್ಷೇಪಕಾರಿ ಅಂಶಗಳನ್ನು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಐಸಿಎಸ್’ಇ ಹೇಳಿದೆ.

ಇನ್ನೊಂದು ಕಡೆ, ಸರ್ಕಾರವು ಪುಸ್ತಕಗಳನ್ನು ಶಾಲೆ ಹಾಗೂ ಮಾರುಕಟ್ಟೆಗಳಿಂದ ಹಿಂಪಡೆಯಬೇಕೆಂದು ಜನರು ಆನ್’ಲೈನ್ ಮನವಿಯನ್ನು ನಡೆಸುತ್ತಿದ್ದಾರೆ.

ಪುಸ್ತಕ ಪ್ರಕಟಿಸಿದ ಸೆಲಿನಾ ಪ್ರಕಾಶನ ಸಂಸ್ಥೆಯು ತಪ್ಪನ್ನು ಒಪ್ಪಿಕೊಂಡಿದ್ದು, ಮುಂದಿನ ಮುದ್ರಣದಲ್ಲಿ ಅದನ್ನು ತೆಗೆಯುವುದಾಗಿ ಭರವಸೆ ನೀಡಿದೆ. ಜನರ ಭಾವನೆಗಳಿಗೆ ಧಕ್ಕೆಯಾಗಿರುವುದಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.  

Follow Us:
Download App:
  • android
  • ios