ಬಹಳ ಸಮಯದಿಂದ ಕಗ್ಗಾಂಟಾಗಿರುವ ಬಾಬ್ರಿ ಮಸೀದಿ- ರಾಮಜನ್ಮಭೂಮಿ ವಿವಾದ ಆದರೆ 1992ರಲ್ಲಿ ಕರಸೇವಕರು ಉರುಳಿಸಿದ ಕಟ್ಟಡವು ದೇವಲಾಯವಾಗಿತ್ತು

ಭೋಪಾಲ್: ಬಹಳ ಸಮಯದಿಂದ ಕಗ್ಗಾಂಟಾಗಿರುವ ಬಾಬ್ರಿ ಮಸೀದಿ- ರಾಮಜನ್ಮಭೂಮಿ ವಿವಾದದ ಬಗ್ಗೆ ದ್ವಾರಕ ಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮ ಹುಟ್ಟಿದ ಸ್ಥಳದಲ್ಲಿ ಮಸೀದಿ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲವೆಂದು ಶಂಕರಾಚಾರ್ಯ ಹೇಳಿದ್ದಾರೆ. ಆದರೆ 1992ರಲ್ಲಿ ಕರಸೇವಕರು ಉರುಳಿಸಿದ ಕಟ್ಟಡವು ದೇವಲಾಯವಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆಂದು ಎಎನ್’ಐ ವರದಿ ಮಾಡಿದೆ.

ನ್ಯಾಯಾಲಯವು ನೀಡಿರುವ ತಡೆಯಾಜ್ಞೆಯು ಹಿಂಪಡೆದ ಬಳಿಕ ಸ್ಥಳದಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಬಹುದಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಾಬ್ರಿ ಮಸೀದಿ- ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.