ಶ್ರೀನಗರ(ಜು.11): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಒಂದು ವಾರಗಳ ಕಾಲ ಸೇನಾ ನೇಮಕಾತಿಗೆ ಚಾಲನೆ ನೀಡಿದೆ.

ಈ ವೇಳೆ ಸೇನಾ ನೇಮಕಾತಿಯಲ್ಲಿ ಕಣಿವೆ ರಾಜ್ಯದ ಸುಮಾರು 5 ಸಾವಿರ ಕಾಶ್ಮೀರಿ ಯುವಕರು ಪಾಲ್ಗೊಂಡಿರುವುದು ಗಮನಾರ್ಹ. ಒಂದು ವಾರದ ಕಾಲ ನಡೆಯಲಿರುವ ನೇಮಕಾತಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುವ ನಿರೀಕ್ಷೆ ಇದೆ.

ಈ ಕುರಿತು ಮಾಹಿತಿ ನೀಡಿರುವ ಸೇನಾ ಮೂಲಗಳು, ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಿ ಯುವಕರು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿವೆ.


ಜುಲೈ 10 ರಿಂದ ಜು.16ರ ವರೆಗೆ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಯುವಕರು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು ಸಹಜವಾಗಿ ಸಂತಸ ತಂದಿದೆ.