ತಮಿಳುನಾಡಿನ ಮಕ್ಕಳ ಪಾಲಿನ ಅಮ್ಮ ಜೆ. ಜಯಲಲಿತಾ ಇಹಲೋಕ ತ್ಯಜಿಸಿ 5 ದಿನಗಳೇ ಕಳೆದಿವೆ. ಆದರೆ ತಮಿಳುನಾಡಿನ ಮಕ್ಕಳು ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಬಹಳಷ್ಟು ಜನರು ಅವರ ಸಾವಿನ ಶಾಕ್'ನಿಂದ ತಮ್ಮ ಜೀವ ಕಳೆದುಕೊಂಡಿದ್ದಾರೆ. ಸದ್ಯ ಈ ಸಾವಿನ ಮಾಹಿತಿ ಕಲೆ ಹಾಕಿರುವ AIADMK ಪಕ್ಷಕ್ಕೆ ಸಾವಿನ ಸಂಖ್ಯೆ ಕೇಳಿ ಶಾಕ್ ಆಗಿದೆ.
ಚೆನ್ನೈ(ಡಿ.10): ತಮಿಳುನಾಡಿನ ಮಕ್ಕಳ ಪಾಲಿನ ಅಮ್ಮ ಜೆ. ಜಯಲಲಿತಾ ಇಹಲೋಕ ತ್ಯಜಿಸಿ 5 ದಿನಗಳೇ ಕಳೆದಿವೆ. ಆದರೆ ತಮಿಳುನಾಡಿನ ಮಕ್ಕಳು ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಬಹಳಷ್ಟು ಜನರು ಅವರ ಸಾವಿನ ಶಾಕ್'ನಿಂದ ತಮ್ಮ ಜೀವ ಕಳೆದುಕೊಂಡಿದ್ದಾರೆ. ಸದ್ಯ ಈ ಸಾವಿನ ಮಾಹಿತಿ ಕಲೆ ಹಾಕಿರುವ AIADMK ಪಕ್ಷಕ್ಕೆ ಸಾವಿನ ಸಂಖ್ಯೆ ಕೇಳಿ ಶಾಕ್ ಆಗಿದೆ.
ಜಯಲಲಿತಾ ಸಾವಿನ ಶಾಕ್ಗೆ 280ಕ್ಕೂ ಹೆಚ್ಚು ಮಂದಿ ಬಲಿ
ಇದನ್ನು ಕೇಳಿದ ಪ್ರತಿಯೊಬ್ಬರಿಗೂ ಶಾಕ್ ಆಗುವುದು ಸಹಜ. ಯಾಕೆಂದರೆ ಜಯಲಲಿತಾ ಸಾವಿನ ಶಾಕಿಂಗ್ ಸುದ್ದಿ ಕೇಳಿ ಮೃತಪಟ್ಟವರ ಸಂಖ್ಯೆ 280ಕ್ಕೂ ಹೆಚ್ಚು. ಇವರಲ್ಲಿ ಕೆಲವರು ಜಯಾ ಮೃತದೇಹ ನೋಡಿ ಸಾವನ್ನಪ್ಪಿದ್ದರೆ ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೇವಲ 'ಅಮ್ಮ'ನ ಸಾವನ್ನಪ್ಪಿದ್ದಾರೆ ಎಂಬ ಸುದ್ದಯನ್ನಷ್ಟೇ ಕೇಳಿ ಮೃತಪಟ್ಟವರು ಹಲವರು.
ಸದ್ಯ ತಮಿಳುನಾಡು ಸರ್ಕಾರ 203 ಮಂದಿ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡಲು ನಿರ್ಧಾರಿಸಿದೆ ಎಂದು ತಿಳಿದು ಬಂದಿದೆ.
