ಗುರುವಾರದಿಂದ ರಮಝಾನ್ ಆರಂಭ

Moon sighted in Delhi Lucknow the holy month begins from May 17
Highlights

ರಮಝಾನ್ ಅಂಗವಾಗಿ ವಿಶ್ವದಾದ್ಯಂತ ಮುಸ್ಲಿಮರು ಒಂದು ತಿಂಗಳ ಕಾಲ ಶ್ರದ್ದೆಯಿಂದ ಉಪವಾಸ ಆಚರಿಸುತ್ತಾರೆ. ತಿಂಗಳುದ್ದಕ್ಕೂ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿ ಕೊಳ್ಳಲಾಗುತ್ತದೆಯಲ್ಲದೇ, ಈ ತಿಂಗಳಿನಲ್ಲಿ ದಾನಧರ್ಮಗಳಿಗೆ‌ ಹೆಚ್ಚು ಒತ್ತು ನೀಡಲಾಗುತ್ತದೆ.

ಬೆಂಗಳೂರು[ಮೇ.16]: ಬುಧವಾರ ರಾತ್ರಿ ರಮಝಾನ್ ತಿಂಗಳಿನ ಚಂದ್ರದರ್ಶನವಾಗಿದ್ದು, ಗುರುವಾರದಿಂದ ಮುಸ್ಲಿಮರ ಪವಿತ್ರ ರಮಝಾನ್ ತಿಂಗಳು ಆರಂಭವಾಗಲಿದೆ.  ಚಂದ್ರದರ್ಶನವಾಗಿರುವುದನ್ನು ಹಿಲಾಲ್ ಕಮಿಟಿ ದೃಢಪಡಿಸಿದ್ದು, ಮೇ.17 ರಂದು ಮೊದಲ ಉಪವಾಸದ ದಿನವಾಗಿರುವುದು.
ರಮಝಾನ್ ಅಂಗವಾಗಿ ವಿಶ್ವದಾದ್ಯಂತ ಮುಸ್ಲಿಮರು ಒಂದು ತಿಂಗಳ ಕಾಲ ಶ್ರದ್ದೆಯಿಂದ ಉಪವಾಸ ಆಚರಿಸುತ್ತಾರೆ. ತಿಂಗಳುದ್ದಕ್ಕೂ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿ ಕೊಳ್ಳಲಾಗುತ್ತದೆಯಲ್ಲದೇ, ಈ ತಿಂಗಳಿನಲ್ಲಿ ದಾನಧರ್ಮಗಳಿಗೆ‌ ಹೆಚ್ಚು ಒತ್ತು ನೀಡಲಾಗುತ್ತದೆ.
ಈ ಬಾರಿಯ ವಿಶೇಷವೆಂದರೆ ಕರ್ನಾಟಕದ ಕರಾವಳಿ ಹಾಗೂ ಒಳನಾಡು ಪ್ರದೇಶದವರಿಗೆ ಒಂದೇ ದಿನ ರಮಝಾನ್ ತಿಂಗಳು ಆರಂಭವಾಗಿದೆ. ಸಾಮಾನ್ಯವಾಗಿ ಭೌಗೋಳಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಒಂದು ದಿನ ಮುನ್ನಾ ಚಂದ್ರದರ್ಶನವಾಗುತ್ತದೆ.
ಮುಸ್ಲಿಮರ ಇಸ್ಲಾಮಿಕ್ ಕ್ಯಾಲೆಂಡರ್ ಚಾಂದ್ರಮಾನಾಧಾರಿತವಾಗಿದ್ದು, ಧಾರ್ಮಿಕ ಕಾರ್ಯಗಳಿಗೆ ಚಂದ್ರದರ್ಶನ ಮಹತ್ವಪೂರ್ಣವಾಗಿದೆ.
ರಮಝಾನ್ ಮುಸಲ್ಮಾನರ ಪವಿತ್ರ ಮಾಸವಾಗಿದ್ದು, ವಿಶ್ವದ ಸುಮಾರು 1.5 ಬಿಲಿಯನ್[150 ಕೋಟಿ] ಮಂದಿ ರಮಝಾನ್ ಆಚರಿಸುತ್ತಾರೆ. 

loader