ಕಾರವಾರದ ಉಂಚಳ್ಳಿ ಫಾಲ್ಸ್’ನಲ್ಲೊಂದು ನಡುರಾತ್ರಿ ವಿಸ್ಮಯ..!

First Published 28, Feb 2018, 2:28 PM IST
Moon Bow In Unchalli Falls
Highlights

ಬಿಸಿಲು ಮಳೆಯಲ್ಲಿ ಕಾಮನಬಿಲ್ಲು ಸಾಮಾನ್ಯ. ಆದರೆ, ನಡು ರಾತ್ರಿಯಲ್ಲಿ ಪೂರ್ಣಚಂದಿರ ಇರುವಾಗ ಕಾಮನಬಿಲ್ಲು ಕಾಣಿಸಿಕೊಳ್ಳುವುದೇ ಅಚ್ಚರಿ. ಅಂತಹದ್ದೊಂದು ಅಚ್ಚರಿಯ ಮೂನ್ ಬೋ ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತದಲ್ಲಿ ಪತ್ತೆಯಾಗಿದೆ.

ಕಾರವಾರ: ಬಿಸಿಲು ಮಳೆಯಲ್ಲಿ ಕಾಮನಬಿಲ್ಲು ಸಾಮಾನ್ಯ. ಆದರೆ, ನಡು ರಾತ್ರಿಯಲ್ಲಿ ಪೂರ್ಣಚಂದಿರ ಇರುವಾಗ ಕಾಮನಬಿಲ್ಲು ಕಾಣಿಸಿಕೊಳ್ಳುವುದೇ ಅಚ್ಚರಿ. ಅಂತಹದ್ದೊಂದು ಅಚ್ಚರಿಯ ಮೂನ್ ಬೋ ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತದಲ್ಲಿ ಪತ್ತೆಯಾಗಿದೆ.

ಬೆಂಗಳೂರು ಮೂಲದ ಛಾಯಾ ಗ್ರಾಹಕರ ತಂಡವೊಂದು ಇದನ್ನು ಸೆರೆಹಿಡಿದಿದೆ. ಈವರೆಗೂ ವಿಶ್ವದ 5 ಕಡೆಗಳಲ್ಲಿ ಮಾತ್ರ ಮೂನ್ ಬೋ ಪತ್ತೆ ಹಚ್ಚ ಲಾಗಿದ್ದು, ಅಮೆರಿಕದಲ್ಲಿ 3, ಆಫ್ರಿಕಾ ಮತ್ತು ಯುರೋಪ್‌ನ ತಲಾ ಒಂದು ಕಡೆ ಕಣ್ಣಿಗೆ ಬಿದ್ದಿದೆ. ಏಷ್ಯಾದಲ್ಲಿ ಉಂಚಳ್ಳಿ ಜಲಪಾತದಲ್ಲಿ ಮಾತ್ರ ಈ ಬೆರಗಿನ ದೃಶ್ಯಾವಳಿ ಕಂಡಿದೆ. ಛಾಯಾಗ್ರಾಹಕರಾದ ಶ್ರೀಹರ್ಷ ಗಜಾಂ, ಅಶ್ವಿನಕುಮಾರ್ ಭಟ್ ಹಾಗೂ ಸುನೀಲ್ ತಟ್ಟಿಸರ ಮತ್ತಿತರರು ಇರುವ ಲ್ಯಾಂಡ್ ಸ್ಕೇಪ್ ವಿಜಾರ್ಡ್ಸ್ ಅವರ ತಂಡ 2017ರಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದೆ.

ಒಂದು ಮೂಲದ ಪ್ರಕಾರ ಮೂನ್ ಬೋಗಳು ಬೇರೆ ಕಡೆಗಳಲ್ಲೂ ಕಾಣಿಸ ಬಹುದು. ಆದರೆ, ದಾಖಲಿಸಿದ್ದು ಮಾತ್ರ ಅತಿ ಅಪರೂಪ. ಪೂರ್ಣಚಂದಿರನ ಬೆಳಕು ಇರುವಾಗ ವಿರುದ್ಧ ದಿಕ್ಕಿನಿಂದ ಜಲಪಾತದ ನೀರಿನ ಹನಿಗಳು ಸಿಂಚನವಾದಾಗ ಈ ಮೂನ್ ಬೋಗಳು ಉಂಟಾಗುತ್ತವೆ. ಆದರೆ, ಎಲ್ಲ ಜಲಪಾತಗಳಲ್ಲೂ ಇವು ಕಾಣಲು ಸಾಧ್ಯವಿಲ್ಲ. ಚಳಿಗಾಲದ ಹುಣ್ಣಿವೆ ರಾತ್ರಿಯಲ್ಲಿ ಜಲಪಾತದಲ್ಲಿ ನೀರು ಹೆಚ್ಚಿರುತ್ತದೆ.

loader