Asianet Suvarna News Asianet Suvarna News

ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ

  • ಕಳೆದ ತಿಂಗಳು ಮುಸ್ಲಿಮರ ಹಜ್​ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ 
  • ಒಲೈಕೆಯಿಲ್ಲದ ಸಬಲೀಕರಣ ನೀತಿ’ಯ ಮುಂದುವರಿದ ಭಾಗ:  ಮುಖ್ತಾರ್ ಅಬ್ಬಾಸ್ ನಖ್ವಿ
Month after scrapping Haj subsidy govt slashes airfare for pilgrims

ನವದೆಹಲಿ: ಕಳೆದ ತಿಂಗಳು ಮುಸ್ಲಿಮರ ಹಜ್​ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮವನ್ನು ಕೈಗೊಂಡಿದೆ.

ಹಜ್ ಯಾತ್ರೆಗೆ ತಗಲುವ ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಮಾನದ  ಟಿಕೆಟ್ ದರಗಳಲ್ಲಿ ಕಡಿತ ಮಾಡುವುದಾಗಿ ಘೋಷಿಸಿದೆ.

ಈ ಕ್ರಮವನ್ನು ಮೋದಿ ಸರ್ಕಾರದ ಮಹತ್ವದ ಕ್ರಮವೆಂದು ಬಣ್ಣಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಇದು ‘ಒಲೈಕೆಯಿಲ್ಲದ ಸಬಲೀಕರಣ ನೀತಿ’ಯ ಮುಂದುವರಿದ ಭಾಗವೆಂದು ಹೇಳಿದ್ದಾರೆ.

ಈ ನಿರ್ಧಾರವು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಯುತ್ತಿದ್ದ ಹಾಜಿಗಳ ಆರ್ಥಿಕ ಹಾಗೂ ರಾಜಕೀಯ ಶೋಷಣೆಗೆ ಅಂತ್ಯಹಾಡುವ ನಿಟ್ಟಿನಲ್ಲಿ ಮುಖ್ಯವಾಗಿದೆಯೆಂದು ಹೇಳಿದ್ದಾರೆ.

ದರಕಡಿತದ ನಿರ್ಧಾರವು ಭಾರತದ 21 ಏರ್’ಪೋರ್ಟ್’ಗಳಿಂದ ಸೌದಿಯ ಜೆದ್ದಾ ಮತ್ತು ಮದೀನಾಗೆ ತೆರಳುವ ಏರ್ ಇಂಡಿಯಾ, ಸೌದಿ ಏರ್’ಲೈಬ್ಸ್ ಮತ್ತು ಫ್ಲೈನಾಸ್ ಸೇರಿದಂತೆ ಎಲ್ಲಾ  ಸಂಸ್ಥೆಗಳಿಗೆ ಅನ್ವಯವಾಗಲಿದೆ.

​ಕಳೆದ ತಿಂಗಳು ಮುಸ್ಲಿಮರ ಹಜ್ ಯಾತ್ರೆಗೆ ನೀಡಲಾಗುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸುವ ತೀರ್ಮಾನವನ್ನು ಕೈಗೊಂಡಿತ್ತು.

ಹಜ್​ ಸಬ್ಸಿಡಿ ಹಣ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಬಳಸುವುದಾಗಿ ಕೇಂದ್ರವು ಹೇಳಿಕೋಂಡಿತ್ತು.

Follow Us:
Download App:
  • android
  • ios