Asianet Suvarna News Asianet Suvarna News

4 ರಾಜ್ಯಗಳ ಭಾರೀ ಪ್ರವಾಹಕ್ಕೆ 200 ಬಲಿ

ದೇಶದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾಲ್ಕು ರಾಜ್ಯಗಳ ಪ್ರವಾಹದಲ್ಲಿ 200 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

Monsoon in India Floods leave nearly 200 dead in 4 states
Author
Bengaluru, First Published Aug 13, 2019, 7:47 AM IST
  • Facebook
  • Twitter
  • Whatsapp

ತಿರುವನಂತಪುರ [ಆ.13]: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಅಪಾಯದ ಮಟ್ಟಮೀರಿ ನದಿಗಳ ಹರಿಯುವಿಕೆಯಿಂದ ಪ್ರವಾಹ ಸಂಕಷ್ಟಕ್ಕೀಡಾದ ಕರ್ನಾಟಕ, ಗುಜರಾತ್‌, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಇದುವರೆಗೂ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ. 

ಈ ನಡುವೆ ದಕ್ಷಿಣದ ರಾಜ್ಯಗಳಲ್ಲಿ ಮಳೆ ಕಡಿಮೆಯಾಗಿದ್ದು, ಪ್ರವಾಹದಲ್ಲೂ ಇಳಿಕೆ ಕಂಡುಬಂದಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಇದೀಗ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಈ 4 ರಾಜ್ಯಗಳಲ್ಲಿ ಪ್ರವಾಹದಿಂದ 12 ಲಕ್ಷಕ್ಕಿಂತ ಹೆಚ್ಚು ಜನರ ಜೀವನ ಅತಂತ್ರವಾಗಿದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏತನ್ಮಧ್ಯೆ, ಉತ್ತರಾಖಂಡ್‌ ಹಾಗೂ ಜಮ್ಮು-ಕಾಶ್ಮೀರದಲ್ಲಿಯೂ ಸುರಿದ ಧಾರಾಕಾರ ಮಳೆಯಿಂದ ಭೂಕುಸಿತ ಸಂಭವಿಸಿದ್ದು, 9 ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಮತ್ತೊಂದೆಡೆ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌ ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್‌ ಸೇರಿ ಇತರೆಡೆಗಳಲ್ಲೂ ಭಾರೀ ಮಳೆಯಾಗಿದೆ. 

ಇನ್ನೊಂದೆಡೆ, ಗುಜರಾತ್‌ನ ಕಛ್‌ನಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆಯಲ್ಲಿ ಸಿಲುಕಿದ್ದ 125 ಮಂದಿಯನ್ನು ಭಾರತೀಯ ವಾಯುಪಡೆ ಎಂಐ-17 ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಮಾಡಿದೆ.

Follow Us:
Download App:
  • android
  • ios