Asianet Suvarna News Asianet Suvarna News

ಶಿವಮೊಗ್ಗದಲ್ಲಿ ಹರಡುತ್ತಿದೆ ಮಂಗನ ಕಾಯಿಲೆ

ಶಿವಮೊಗ್ಗದ 6 ರೋಗಿಗಳಿಗೆ ಮಂಗನ ಕಾಯಿಲೆ ಇರುವುದು ಖಚಿತವಾಗಿದೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮೂಲಗಳು ತಿಳಿಸಿವೆ. 
 

monkey Fever Spreading Fast In Shivamogga
Author
Bengaluru, First Published Jan 8, 2019, 10:31 AM IST
  • Facebook
  • Twitter
  • Whatsapp

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೊಗ್ಗದ 6 ರೋಗಿಗಳಿಗೆ ಮಂಗನ ಕಾಯಿಲೆ ಇರುವುದು ಖಚಿತವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಹಾಗೂ ಆಸುಪಾಸಿನ ಸುಮಾರು 41 ಮಂದಿ ಶಂಕಿತ ಮಂಗನ ಕಾಯಿಲೆ ರೋಗಿಗಳು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷೆಗೊಳಪಡಿಸಿದಾಗ 6 ಮಂದಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ.

 ಅವರಲ್ಲಿ 3 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಆದರೆ 3 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

ಮಂಗನ ಕಾಯಿಲೆಗೆ ಮತ್ತೆರಡು ಬಲಿ..!

Follow Us:
Download App:
  • android
  • ios