ತುಮಕೂರು (ಫೆ. 13): ಮಹಿಳೆಯೊಬ್ಬರ ಸೀಮಂತ ಶಾಸ್ತ್ರ ನಡೆಯುವ ವೇಳೆ ಮನೆಗೆ ಬಂದ ಗರ್ಭಿಣಿಕೋತಿಗೂ ಸೀಮಂತ ಕಾರ್ಯ ಮಾಡಿ ಕಳುಹಿಸಿದ ಅಪರೂಪದ ಘಟನೆ ಇಲ್ಲಿಯ ಗಂಗೊತ್ರಿ ನಗರದಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಅಶೋಕ್ ಎನ್ನುವವರ ಪತ್ನಿ ಅನುಷಾಗೆ ಸೀಮಂತ ಕಾರ್ಯ ನಡೆಯುತ್ತಿತ್ತು. ಈ ವೇಳೆ ಮನೆಯ ಕಿಟಕಿ ಬಳಿ ಗರ್ಭಿಣಿ ಕೋತಿಯೊಂದು ಬಂದು ಸೀಮಂತ ಕಾರ್ಯವನ್ನು ನೋಡುತ್ತಿತ್ತು. ಇದನ್ನು ಗಮನಿಸಿದ ಮನೆಯವರು ಸಾಕ್ಷಾತ್ ಹನುಮಂತನೇ ಬಂದು ಆಶೀರ್ವಾದ ಮಾಡಿದಂಗಿದೆ ಎಂದು ಭಾವಿಸಿ ಆ ಕೋತಿಗೂ ಹೂವು, ಹಣ್ಣು, ಸಿಹಿ ತಿಂಡಿಗಳನ್ನು ನೀಡಿದ್ದಾರೆ.

ಸೀಮಂತ ಕಾರ್ಯದ ವಿಡಿಯೋ ಇಲ್ಲಿದೆ ನೋಡಿ.  

"