ನಗರದ  ಶಾರದಾ ಟಾಕೀಜ್ ಬಳಿಯಲ್ಲಿರುವ ವಿವಿಧ 7 ಕ್ಷೌರದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಕನ್ನಡಿ ಸೇರಿದಂತೆ ವಿವಿಧ ಪಿಠೋಪಕರಣಗಳನ್ನು ಹಾಳು ಮಾಡಿದೆ. ಅಷ್ಟೇ ಅಲ್ಲ ಮಂಗವನ್ನು ಓಡಿಸಲು ಹೋದ ಕ್ಷೌರದಂಗಡಿಯ ಮಾಲೀಕರ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ. 

ಕೊಪ್ಪಳ(ಫೆ.22): ಕೊಪ್ಪಳದಲ್ಲಿ ಮಂಗವೊಂದು 15 ದಿನದಲ್ಲಿ 7 ಕ್ಷೌರದ ಅಂಡಗಿಗಳ ಮೇಲೆ ದಾಳಿ ನಡೆಸಿರುವ ಘಟನೆಯೊಂದು ನಡೆದಿದೆ.

ನಗರದ ಶಾರದಾ ಟಾಕೀಜ್ ಬಳಿಯಲ್ಲಿರುವ ವಿವಿಧ 7 ಕ್ಷೌರದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಕನ್ನಡಿ ಸೇರಿದಂತೆ ವಿವಿಧ ಪಿಠೋಪಕರಣಗಳನ್ನು ಹಾಳು ಮಾಡಿದೆ. ಅಷ್ಟೇ ಅಲ್ಲ ಮಂಗವನ್ನು ಓಡಿಸಲು ಹೋದ ಕ್ಷೌರದಂಗಡಿಯ ಮಾಲೀಕರ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ. 

ಮಂಗನ ಉಪಟಳದ ಬಗ್ಗೆ ಕ್ಷೌರದ ಅಂಡಗಿಯವರಯ ನಗರಸಭೆಗೆ ದೂರು ನೀಡಿದಾಗ ಮಂಗವನ್ನು ಸೆರೆ ಹಿಡಿದಿದ್ದರು. ಆದರೆ ಆ ಮಂಗ ಮತ್ತೆ ಬಂದಿದ್ದು, ಅಂಗಡಿಗಳ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಮಂಗದಿಂದ ಕ್ಷೌರದ ಅಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರವೇ ಮಂಗವನ್ನು ಹಿಡಿಯಬೇಕೆಂದು ಅಂಗಡಿ ಮಾಲೀಕರು ನಗರಸಭೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.