ನವದೆಹಲಿ (ಸೆ.17): ಸ್ವೀಡನ್ ನಲ್ಲಿ ಭಾರತೀಯ ರಾಯಭಾರಿಯಾಗಿ ಮೋನಿಕಾ ಕಪಿಲ್ ಮೊಹ್ತಾ ನೇಮಕವಾಗಿದ್ದಾರೆ.

ಪ್ರಸ್ತುತ ವಿದೇಶಾಂಗ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೋನಿಕಾ 1985 ರ ಬ್ಯಾಚ್ ನ ಐಎಫ್ಎಸ್ ಅಧಿಕಾರಿಯಾಗಿದ್ದಾರೆ. ಹಿಂದೆ ಪೋಲೆಂಡ್ ಮತ್ತು ಲಿತುನಿಯಾದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಶೀಘ್ರದಲ್ಲಿಯೇ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.