Asianet Suvarna News Asianet Suvarna News

ರೇಣುಕಾಚಾರ್ಯ ಪ್ರಯಾಣಿಸುತ್ತಿದ್ದ ಕಾರಿನಲ್ಲಿ 2.96 ಲಕ್ಷ ರೂ. ಹಣ ಪತ್ತೆ

.9ರಂದು ಗುಂಡ್ಲುಪೇಟೆ ಉಪಚುನಾವಣೆ ಪ್ರಯುಕ್ತ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಬೆಂಬಲಿಗನ ಕಾರಿನಲ್ಲಿ ರೇಣುಕಾಚಾರ್ಯ ಅವರು ಪ್ರಯಾಣಿಸುತ್ತಿದ್ದರು.

Money Detected at Ex minister Renukacharya supporter Car
  • Facebook
  • Twitter
  • Whatsapp

ಗುಂಡ್ಲುಪೇಟೆ(ಏ.07): ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ 2.96 ಲಕ್ಷ ರೂ. ಹಣ ಪತ್ತೆಯಾಗಿದೆ.

ಏ.9ರಂದು ಗುಂಡ್ಲುಪೇಟೆ ಉಪಚುನಾವಣೆ ಪ್ರಯುಕ್ತ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಬೆಂಬಲಿಗನ ಕಾರಿನಲ್ಲಿ ರೇಣುಕಾಚಾರ್ಯ ಅವರು ಪ್ರಯಾಣಿಸುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ  KA 02, MT 22 ಕಾರನ್ನು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ.

ತದ ನಂತರ ಬೆಂಬಲಿಗನ ಕಾರು ಬಿಟ್ಟು ತಮ್ಮ ಕಾರಿನಲ್ಲಿ ರೇಣುಕಾಚಾರ್ಯ ಎಸ್ಕೇಪ್ ಆಗಿದ್ದಾರೆ. ಹಣವಿರುವ ಬಗ್ಗೆ ಸುವರ್ಣ ಸುದ್ದಿ ವಾಹಿನಿಯ ಜೊತೆ ಮಾತನಾಡಿದ ರೇಣುಕಾಚಾರ್ಯ ತಾವು ಯಾವುದೇ ತನಿಖೆಯನ್ನು ಎದುರಿಸಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.

Follow Us:
Download App:
  • android
  • ios