ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಕ್ತಾಯ

Money Counting completed in Male Madeshvara Temple
Highlights

ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಹುಂಡಿಯಲ್ಲಿ 1 ಕೋಟಿ 48 ಲಕ್ಷದ 90 ಸಾವಿರದ 538 ರೂಪಾಯಿ ನಗದು ದೊರೆತಿದೆ. ಅಲ್ಲದೆ 90 ಗ್ರಾಂ ಚಿನ್ನ ಮತ್ತು 1 ಕೆ.ಜಿ 490 ಗ್ರಾಂ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ. 

ಚಾಮರಾಜನಗರ (ಮೇ. 30): ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಹುಂಡಿಯಲ್ಲಿ 1 ಕೋಟಿ 48 ಲಕ್ಷದ 90 ಸಾವಿರದ 538 ರೂಪಾಯಿ ನಗದು ದೊರೆತಿದೆ. ಅಲ್ಲದೆ 90 ಗ್ರಾಂ ಚಿನ್ನ ಮತ್ತು 1 ಕೆ.ಜಿ 490 ಗ್ರಾಂ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ. 

ಮೇ 29ರ ತಡ ರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಇಷ್ಟೊಂದು ಕಾಣಿಕೆ ಭಕ್ತರಿಂದ ಬಂದಿದೆ. ಹುಂಡಿ ಎಣಿಕೆ ಕಾರ್ಯ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ. ರೂಪ ಅಧ್ಯಕ್ಷತೆಯಲ್ಲಿ ಸಾಲೂರು ಮಠದ ಸ್ವಾಮೀಜಿ ಗುರುಸ್ವಾಮಿ ಸಮ್ಮಖದಲ್ಲಿ ಮತ್ತು ಎಸ್ ಬಿಐ ಬ್ಯಾಂಕ್ ಸಿಬ್ಬಂದಿಗಳು ಸಿ.ಸಿ. ಕ್ಯಾಮೆರಾದ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ.  

ಪ್ರತಿ ತಿಂಗಳ ಹುಂಡಿ ಎಣಿಕೆ ಕಾರ್ಯ ತಿಂಗಳ ಕೊನೆಯ ದಿನದಂದು ನಡೆಯುತ್ತದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತರುವ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ 2ನೇ ಸ್ಥಾನವನ್ನು ಮಲೆ ಮಹದೇಶ್ವರ ದೇವಾಲಯದ ಪಡೆದುಕೊಂಡಿದೆ.  

loader