ಟಿಪ್ಪು ಒಬ್ಬ ವಿವಾದಿತ ವ್ಯಕ್ತಿ. ಕೂರ್ಗಿನಲ್ಲಿ ಹಿಂದೂಗಳನ್ನು ಕೊಂದಿರುವವ ವ್ಯಕ್ತಿ. ಅಲ್ಲದೇ ನಾಯರ್​ಗಳನ್ನು ಇಸ್ಲಾಂಗೆ ಮತಾಂತರ ಮಾಡಿದವ

ಸರ್ಕಾರ ಟಿಪ್ಪು ಜಯಂತಿ ಬದಲು ದಿವಾನ್ ಮಿರ್ಜಾ ಇಸ್ಮಾಯೀಲ್ ಅಥವಾ ಮೈಸೂರು ಒಡೆಯರ್ ಜಯಂತಿ ಆಚರಿಸಲಿ ಎಂದು ಉದ್ಯಮಿ ಮೋಹನ್​ದಾಸ್ ಪೈ ಬೆಂಗಳೂರಿನಲ್ಲಿ ಹೇಳಿದ್ದಾರೆ. ಹಿಂದೂ ಅಧ್ಯಾತ್ಮಿಕ ಮತ್ತು ಸೇವಾಮೇಳ ಆಯೊಜನೆ ಬಗ್ಗೆ ನಡೆದ ಸುದ್ದಿಗೋಷ್ಟಿ ಬಳಿಕ ಮಾತಾಡಿದ ಮೋಹನ್​ ದಾಸ್ ಪೈ, ಟಿಪ್ಪು ಒಬ್ಬ ವಿವಾದಿತ ವ್ಯಕ್ತಿ. ಕೂರ್ಗಿನಲ್ಲಿ ಹಿಂದೂಗಳನ್ನು ಕೊಂದಿರುವವ ವ್ಯಕ್ತಿ. ಅಲ್ಲದೇ ನಾಯರ್​ಗಳನ್ನು ಇಸ್ಲಾಂಗೆ ಮತಾಂತರ ಮಾಡಿದವ. ಇಂಥ ವ್ಯಕ್ತಿಯ ಹೆಸರಿನಲ್ಲಿ ಜಯಂತಿ ಆಚರಿಸಿದೆ ಸಮಾಜದಲ್ಲಿ ವೈಷಮ್ಯ ಹೆಚ್ಚಾಗಲಿದೆ ಎಂದು ಪೈ ಹೇಳಿದರು.