ಮಹಾವೀರ ಜಯಂತಿಯ ಅಂಗವಾಗಿ ಭಾನುವಾರ ಮಾತನಾಡಿದ ಅವರು, ಗೋವುಗಳ ರಕ್ಷಣೆ ಹೆಸರಿನಲ್ಲಿ ಬೇರೊಬ್ಬರ ನಂಬಿಕೆಗೆ ಘಾಸಿಯಾಗುವಂತಹ ಕೆಲಸ ಗಳನ್ನು ಮಾಡಬಾರದು. ಹಿಂಸಾಚಾರವನ್ನೂ ನಡೆಸಬಾ ರದು. ಇದರಿಂದಾಗಿ ಗೋವು ರಕ್ಷಕರ ಪ್ರಯತ್ನಕ್ಕೇ ಕೆಟ್ಟಹೆಸರು ಬರಲಿದೆ. ಸಂವಿಧಾನ ಹಾಗೂ ಕಾನೂನು ಪಾಲಿಸಿಕೊಂಡು ಗೋವುಗಳನ್ನು ರಕ್ಷಿಸಬೇಕು ಎಂದು ಹೇಳಿದರು.

ರಾಜಸ್ಥಾನದ ಅಳ್ವರ್‌ನಲ್ಲಿ ಗೋರಕ್ಷಕರ ಗುಂಪೊಂದು ಮುಸಲ್ಮಾನ ವ್ಯಕ್ತಿಯನ್ನು ಬಡಿದು ಕೊಂದಿತ್ತು. ಇದರ ಬೆನ್ನಲ್ಲೇ ಭಾಗವತ್ ನೀಡಿರುವ ಈ ಹೇಳಿಕೆ ಮಹತ್ವದ್ದಾಗಿದೆ. ಹಲವು ರಾಜ್ಯಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು (ಆರ್‌ಎಸ್‌ಎಸ್ ಹಿನ್ನೆಲೆಯ ಬಿಜೆಪಿ ನಾಯಕರು) ಅಧಿಕಾರದಲ್ಲಿದ್ದಾರೆ. ಅವರು ಗೋಹತ್ಯೆ ನಿಷೇಧಕ್ಕೆ ಕಾನೂನು ತಂದಿದ್ದಾರೆ. ಸ್ಥಳೀಯ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಿಕೊಂಡು ಇತರೆ ರಾಜ್ಯ ಸರ್ಕಾರಗಳೂ ಅಂತಹುದೇ ಕಾಯ್ದೆ ತರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನೊಬ್ಬ ಪಶು ವೈದ್ಯ. ಹೀಗಾಗಿ ಗೋಮೂತ್ರ, ಸಗಣಿ ಸೇರಿದಂತೆ ದೇಶಿ ಗೋವುಗಳ ಉಪಯುಕ್ತತೆಯ ಅರಿವಿದೆ. ಇದನ್ನು ವೈಜ್ಞಾನಿಕ ಸಂಸ್ಥೆಗಳೂ ಒಪ್ಪಿಕೊಂಡಿವೆ ಎಂದರು.