ಎರಡು ವರ್ಷಗಳ ಹಿಂದೆ ಮಾಜಿ ಮಹಾರಾಜ ಅಬ್ದುಲ್ ಅಜೀಜ್ ಅವರ ನಿಧನದ ನಂತರ ಅವರ ಸೋದರ ಸಲ್ಮಾನ್ ಖಾನ್ ಸೌದಿ ದೊರೆಯಾಗಿ ಅಧಿಕಾರಕ್ಕೇರಿದರು. ಅಬ್ದುಲ್ ಅಜೀಜ್ ಅವರ ಪುತ್ರನಾಗಿದ್ದ ಮೊಹಮ್ಮದ್ ಬಿನ್ ನಾಯೆಫ್ ಅವರನ್ನು ಅರಸೊತ್ತಿಗೆಯ ವಾರಸುದಾರನಾಗಿ ಮಾಡಲಾಗಿತ್ತು. ಇದೀಗ ಸಲ್ಮಾನ್ ತಮ್ಮ ಪುತ್ರನನ್ನೇ ಅಧಿಕಾರಕ್ಕೇರಿಸಲು ನಿಶ್ಚಿಯಿಸಿದ್ದಾರೆ.

ರಿಯಾದ್(ಜೂನ್ 20): ಸೌದಿ ರಾಜಕುಟುಂಬದಲ್ಲಿ ಇಂದು ಮತ್ತೊಮ್ಮೆ ಕ್ಷಿಪ್ರ ಕಾರ್ಯಾಚರಣೆ ನಡೆದಿದೆ. ಸೌದಿ ಅರೇಬಿಯಾದಲ್ಲಿ ಅಲ್-ಖೈದಾದ ಆರ್ಭಟವನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದ 57 ವರ್ಷದ ಯುವರಾಜ ಮೊಹಮ್ಮದ್ ಬಿನ್ ನಾಯೆಫ್ ಅವರನ್ನು ಉಚ್ಛಾಟಿಸಲಾಗಿದೆ. ಮಹಾರಾಜ ಸಲ್ಮಾನ್ ತಮ್ಮ ಮಗ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ತಮ್ಮ ವಾರಸುದಾರ ಹಾಗೂ ರಾಜಕುಮಾರನಾಗಿ ಗದ್ದುಗೆಗೇರಿಸಿದ್ದಾರೆ. ಈ ಮುಂಚೆ ರಕ್ಷಣಾ ಸಚಿವರಾಗಿದ್ದ 31 ವರ್ಷದ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಉಪ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಎರಡು ವರ್ಷಗಳ ಹಿಂದೆ ಮಾಜಿ ಮಹಾರಾಜ ಅಬ್ದುಲ್ ಅಜೀಜ್ ಅವರ ನಿಧನದ ನಂತರ ಅವರ ಸೋದರ ಸಲ್ಮಾನ್ ಖಾನ್ ಸೌದಿ ದೊರೆಯಾಗಿ ಅಧಿಕಾರಕ್ಕೇರಿದರು. ಅಬ್ದುಲ್ ಅಜೀಜ್ ಅವರ ಪುತ್ರನಾಗಿದ್ದ ಮೊಹಮ್ಮದ್ ಬಿನ್ ನಾಯೆಫ್ ಅವರನ್ನು ಅರಸೊತ್ತಿಗೆಯ ವಾರಸುದಾರನಾಗಿ ಮಾಡಲಾಗಿತ್ತು. ಇದೀಗ ಸಲ್ಮಾನ್ ತಮ್ಮ ಪುತ್ರನನ್ನೇ ಅಧಿಕಾರಕ್ಕೇರಿಸಲು ನಿಶ್ಚಿಯಿಸಿದ್ದಾರೆ. ನಾಯೆಫ್ ಅವರನ್ನು ಉಪಪ್ರಧಾನಿ ಸ್ಥಾನದಿಂದ ಮಾತ್ರವಲ್ಲದೇ ಆಂತರಿಕ ಸಚಿವ ಸ್ಥಾನದಿಂದಲೂ ಉಚ್ಛಾಟಿಸಿದ್ದಾರೆ.

ಇನ್ನು, 31 ವರ್ಷದ ಮೊಹಮ್ಮದ್ ಬಿನ್ ಸಲ್ಮಾನ್ ಅವರು ರಕ್ಷಣಾ ಸಚಿವರಾಗಿ ಇತ್ತೀಚಿನ ದಿನಗಳಲ್ಲಿ ಸೌದಿಯಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಇನ್ನೂ ಯುವಕರಾಗಿರುವ ಸಲ್ಮಾನ್'ಗೆ ಇಲ್ಲಿಯ ಯುವಜನತೆಯ ಬೆಂಬಲವಿದೆ ಎಂದೂ ಹೇಳಲಾಗುತ್ತಿದೆ.