ಇಂಗ್ಲೆಂಡ್' ಬೌಲರ್ ಮೋಹಿನ್ ಅಲಿ ಹ್ಯಾಟ್ರಿಕ್ ವಿಕೇಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸುವುದರ ಜೊತೆಗೆ  ಓವಲ್'ನಲ್ಲಿ ಹ್ಯಾಟ್ರಿಕ್ ವಿಕೇಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.

ಲಂಡನ್(ಆ.01): ದಕ್ಷಿಣ ಆಫ್ರಿಕಾ ಆಟಗಾರರು ಶೂನ್ಯದಲ್ಲೂ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ವರು ಆಟಗಾರರು ಶೂನ್ಯಕ್ಕೆ ಔಟಾಗಿದ್ದಾರೆ.

ಲಂಡನ್'ನ ಓವಲ್'ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್' ಆ ಕ್ರೀಡಾಂಗಣದಲ್ಲಿ ನಡೆದ 100ನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ನಾಲ್ವರು ಬ್ಯಾಟ್ಸ್'ಮೆನ್'ಗಳು ಸೊನ್ನೆಗೆ ಪೆವಿಲಿಯನ್'ಗೆ ತೆರಳಿದ್ದು ಹೊಸ ದಾಖಲೆಯಾಗಿದೆ. ಡೀನ್ ಎಲ್ಗರ್, ಕಾಗಿಸೊ ರಬಾಡ, ಮೊರ್ನೆ ಮೊರ್ಕೆಲ್ ಹಾಗೂ ಕ್ರಿಸ್ ಮೋರಿಸ್ ಬಂದ ದಾರಿಯಲ್ಲಿಯೇ ಯಾವುದೇ ರನ್'ಗಳಿಸದೆ ಮೋಹಿನ್ ಅಲಿಗೆ ವಿಕೇಟ್ ಒಪ್ಪಿಸಿದ್ದಾರೆ.

ಇಂಗ್ಲೆಂಡ್' ಬೌಲರ್ ಮೋಹಿನ್ ಅಲಿ ಹ್ಯಾಟ್ರಿಕ್ ವಿಕೇಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸುವುದರ ಜೊತೆಗೆ ಓವಲ್'ನಲ್ಲಿ ಹ್ಯಾಟ್ರಿಕ್ ವಿಕೇಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಇಂಗ್ಲೆಂಡ್ 239 ರನ್'ಗಳ ಜಯ ದಾಖಲಿಸುವುದರೊಂದಿಗೆ ಟೆಸ್ಟ್ ಸರಣಿಯನ್ನು 2-1 ರಿಂದ ಮುನ್ನಡೆ ಸಾಧಿಸಿತು.