ಮೋದಿ ಅವರ ಕುಟುಂಬ ಸಾಧಾರಣವಾದ ಈ ಮನೆಯನ್ನು ಮಾರಾಟ ಮಾಡಿ ಗಾಂಧಿ ನಗರಕ್ಕೆ ಸ್ಥಳಾಂತರಗೊಂಡಿತ್ತು. ಈ ಮನೆಯಲ್ಲಿ ಮೋದಿ ಅವರು ತಮ್ಮ ಬಾಲ್ಯವನ್ನು ಕಳೆದಿದ್ದರು. ಇದೇ ವೇಳೆ, ಗುಜರಾತ್ ಪ್ರವಾಸೋದ್ಯಮ ಇಲಾಖೆ ಕೂಡ ವಡನಗರ- ಮೊಧೆರಾ- ಪಠಾಣ ಅನ್ನು ಪಾರಂಪರಿಕ ಪ್ರವಾಸಿ ಸರ್ಕ್ಯೂಟ್ ಆಗಿ ಅಭಿವೃದ್ಧಿ ಪಡಿಸುತ್ತಿದೆ.
ಅಹ್ಮದಾಬಾದ್(ಏ.25): ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯ ಜೀವನವನ್ನು ಕಳೆದಿದ್ದ ಮನೆ ಶೀಘ್ರದಲ್ಲೇ ಮ್ಯೂಸಿಯಂ ಆಗಿ ಪರಿವರ್ತನೆ ಆಗಲಿದೆ. ಮೋದಿ ಅವರ ಕುಟುಂಬ ಈ ಹಿಂದೆ ವಾಸಿಸಿದ್ದ ಗುಜರಾತಿನ ಮೆಹ್ಸಾನಾ ಜಿಲ್ಲೆಯ ವಡನಗರದಲ್ಲಿರುವ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿಸಿದೆ.
ಮೋದಿ ಅವರ ಕುಟುಂಬ ಸಾಧಾರಣವಾದ ಈ ಮನೆಯನ್ನು ಮಾರಾಟ ಮಾಡಿ ಗಾಂಧಿ ನಗರಕ್ಕೆ ಸ್ಥಳಾಂತರಗೊಂಡಿತ್ತು. ಈ ಮನೆಯಲ್ಲಿ ಮೋದಿ ಅವರು ತಮ್ಮ ಬಾಲ್ಯವನ್ನು ಕಳೆದಿದ್ದರು. ಇದೇ ವೇಳೆ, ಗುಜರಾತ್ ಪ್ರವಾಸೋದ್ಯಮ ಇಲಾಖೆ ಕೂಡ ವಡನಗರ- ಮೊಧೆರಾ- ಪಠಾಣ ಅನ್ನು ಪಾರಂಪರಿಕ ಪ್ರವಾಸಿ ಸರ್ಕ್ಯೂಟ್ ಆಗಿ ಅಭಿವೃದ್ಧಿ ಪಡಿಸುತ್ತಿದೆ.
ಸ್ವದೇಶ ದರ್ಶನ ಸರ್ಕೀಟ್‌ಗೆ ಕೇಂದ್ರ ಸರ್ಕಾರ 99.81 ಕೋಟಿ ರು. ನೀಡಿದೆ. ಜೊತೆಗೆ ಮೋದಿ ಚಹಾ ಮಾರುತ್ತಿದ್ದ ವಡನಗರ ರೈಲು ನಿಲ್ದಾಣದ ಅಭಿವೃದ್ಧಿಗೂ ಇತ್ತೀಚೆಗೆ 7.9 ಕೋಟಿ ರು. ಲಭಿಸಿತ್ತು.