2 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಮೆರಿಕಾ ತಲುಪಿದ್ದಾರೆ. ನಿನ್ನೆ ವಾಷಿಂಗ್ಟನ್'​ನಲ್ಲಿ  ಪ್ರಮುಖ ಇಪ್ಪತ್ತು ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದ್ದರು. ಇಂದು ವಿಶ್ವದ ದೊಡ್ಡಣ್ಣನನ್ನು ಮೋದಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇಡೀ ವಿಶ್ವದ ಕಣ್ಣು ಈಗ ಅಮೆರಿಕದತ್ತ ನೋಡುತ್ತಿದೆ.

ವಾಷಿಂಗ್ಟನ್(ಜೂ.26): 2 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಮೆರಿಕಾ ತಲುಪಿದ್ದಾರೆ. ನಿನ್ನೆ ವಾಷಿಂಗ್ಟನ್'​ನಲ್ಲಿ ಪ್ರಮುಖ ಇಪ್ಪತ್ತು ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದ್ದರು. ಇಂದು ವಿಶ್ವದ ದೊಡ್ಡಣ್ಣನನ್ನು ಮೋದಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇಡೀ ವಿಶ್ವದ ಕಣ್ಣು ಈಗ ಅಮೆರಿಕದತ್ತ ನೋಡುತ್ತಿದೆ.

ಮೂರು ದಿನಗಳ ಅಮರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ನಿನ್ನೆ ಅದ್ದೂರಿ ಸ್ವಾಗತ ಸಿಕ್ಕಿತು. ವಾಷಿಂಗ್ಟನ್‌ಗೆ ಬಂದಿಳಿದ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು. ಡೊನಾಲ್ಡ್ ಟ್ರಂಪ್​ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅಮೆರಿಕಾಗೆ ಭೇಟಿ ನೀಡಿರೋದು ಇಡೀ ವಿಶ್ವದ ಗಮನ ಸೆಳೆದಿದೆ. ವಿಶ್ವದ ಬಲಿಷ್ಠ ನಾಯಕರಿಬ್ಬರ ಭೇಟಿಯನ್ನ ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದೆ.

ನಿನ್ನೆ ವಾಷಿಂಗ್ಟನ್'​ನಲ್ಲಿ ವಿಶ್ವದ ಉದ್ಯಮಿ ದಿಗ್ಗಜರಾದ ಮೈಕ್ರೋಸಾಫ್ಟ್​ ಸಂಸ್ಥೆಯ ಸಿಇಒ ಸತ್ಯ ನಡೆಲ್ಲಾ,ಗೂಗಲ್​ ಸಂಸ್ಥೆಯ ಸಿಇಒ ಸುಂದರ್​ ಪಿಚೈ,ವಾಲ್​ಮಾರ್ಟ್​ ಸಂಸ್ಥೆಯ ಸಿಇಒ ಮ್ಯಾಕ್​ ಮಿಲಾನ್​,ಆ್ಯಪಲ್​ ಕಂಪನಿಯ ಸಿಇಒ ಟಿಮ್​ ಕುಕ್​, ಸೇರಿದಂತೆ ಪ್ರತಿಷ್ಠಿತ 21 ಕಂಪನಿಗಳ ಸಿಇಒಗಳನ್ನು ಮೋದಿ ಭೇಟಿಯಾಗಿ ಮಾತುಕತೆ ನಡೆಸಿದರು. ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದರು.

ಇದೇ ವೇಳೆ ಮಾತನಾಡಿದ ಗೂಗಲ್​ ಸಂಸ್ಥೆಯ ಸಿಇಒ ಸುಂದರ್​ ಪಿಚ್ಚೈ ಜುಲೈ ಒಂದನ್ನು ಬಹಳ ಕಾತುರದಿಂದ ಎದುರು ನೋಡುತ್ತಿರುವುದಾಗಿ ಹೇಳಿದರು. ಇದಾದ ಬಳಿಕ ಪ್ರಧಾನಿ ಮೋದಿ ಅಮೆರಿಕಾದ ವಾಷಿಂಗ್ಟನ್​ ಡಿಸಿಯ ಉಪನಗರವಾದ ವರ್ಜಿನಿಯದಲ್ಲಿ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿದ್ರು. ಬಳಿಕ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅಮೆರಿಕದಲ್ಲಿ ಮಿನಿ ಭಾರತವನ್ನು ನೋಡಿದಷ್ಟೆ ಸಂತೋಷವಾಗಿದೆ ಅಂತಾ ಹೇಳಿದರು.

ಇನ್ನೂ ಇದೇ ಮೊದಲ ಬಾರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿಗರಿಗೆ ಔತಣಕೂಟ ಆಯೋಜಿಸಿದ್ದಾರೆ. ವೈಟ್‌‌ಹೌಸ್‌‌ನಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವ್ಯಪಾರ ವಹಿವಾಟು, ಭಯೋತ್ಪಾದನೆ ನಿಗ್ರಹ ಸೇರಿದಂತೆ ವಿವಾದಿತ ಎಚ್1ಬಿ1 ವೀಸಾ ಬಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ. ಅಲ್ದೇ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಒಟ್ಟಿನಲ್ಲಿ ಇಡೀ ವಿಶ್ವವೇ ಉಭಯ ನಾಯಕರ ಸಮಾಗಮವನ್ನು ಎದುರು ನೋಡ್ತಿದೆ.