ಕಾಶ್ಮೀರದ ಯುವಕರು ಟೂರಿಸಂ ಮತ್ತು ಟೆರರಿಸಂನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಜಮ್ಮುವಿನ ಚೆನಾನಿ ಮತ್ತು ನಸ್ರಿ ನಡುವಿನ ಸುರಂಗವನ್ನು ಉದ್ಘಾಟನೆ ಮಾಡಿದ ಮೋದಿ, ಆ ಬಳಿಕ ಜಮ್ಮ-ಕಾಶ್ಮೀರದ ಯುವ ಜನತೆಗೆ ಕಿವಿಮಾತು ಹೇಳಿದರು.
ಕಾಶ್ಮೀರ(ಎ.03): ಕಾಶ್ಮೀರದ ಯುವಕರು ಟೂರಿಸಂ ಮತ್ತು ಟೆರರಿಸಂನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಜಮ್ಮುವಿನ ಚೆನಾನಿ ಮತ್ತು ನಸ್ರಿ ನಡುವಿನ ಸುರಂಗವನ್ನು ಉದ್ಘಾಟನೆ ಮಾಡಿದ ಮೋದಿ, ಆ ಬಳಿಕ ಜಮ್ಮ-ಕಾಶ್ಮೀರದ ಯುವ ಜನತೆಗೆ ಕಿವಿಮಾತು ಹೇಳಿದರು.
ಕಾಶ್ಮೀರ ಒಂದು ಸುಂದರ ಪ್ರವಾಸಿತಾಣ, 40 ವರ್ಷಗಳಿಂದ ಈ ಟೆರರಿಸಂ ಕೈ ಬಿಟ್ಟು, ಟೂರಿಸಂ ಬಗ್ಗೆ ಗಮನ ಹರಿಸಿದ್ದರೆ, ಇಡೀ ವಿಶ್ವವೇ ಕಾಶ್ಮೀರದ ಬಾಗಿಲ ಮುಂದೆ ಬಂದು ನಿಲ್ಲುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಒಂದು ಕಲ್ಲಿನಿಂದ ನಾವು ಹೊಡೆಯಬಹುದು, ಆದರೆ ಅದೇ ಕಲ್ಲಿಂದ ದೇಶವನ್ನೂ ಕಟ್ಟಬಹುದು. ಆ ಕಲ್ಲನ್ನ ನಾವು ಯಾವ ರೀತಿ ಬಳಕೆ ಮಾಡಿಕೊಳ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ. ಕಾಶ್ಮೀರವನ್ನು ಒಂದು ಕಲ್ಲಿಗೆ ಹೋಲಿಕೆ ಮಾಡಿ ನೋಡುವುದಾದರೆ, ಕಾಶ್ಮೀರವನ್ನು ಟೆರರಿಸಂ ಮಾರ್ಗಕ್ಕೆ ಹೊಡೆಯುವ ಬದಲು, ಟೂರಿಸಂ ಅನ್ನು ಅಭಿವೃದ್ಧಿ ಪಡಿಸಲು ಬಳಕೆ ಮಾಡಿಕೊಳ್ಳಿ, 40 ವರ್ಷದಿಂದ ಹರಿದ ರಕ್ತದಲ್ಲಿ ಅಮಾಯಕರ ಬಲಿಯಾಗಿದೆಯೇ ವಿನಃ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
