Asianet Suvarna News Asianet Suvarna News

ಅಡ್ವಾಣಿಯನ್ನು ಮೋದಿ ಒದ್ದು ಹೊರದಬ್ಬಿದರು: ರಾಹುಲ್‌

‘ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಹಿಂದು ಧರ್ಮದಲ್ಲಿ ಗುರುವೇ ಶ್ರೇಷ್ಠ. ಅದು ಗುರುಶಿಷ್ಯ ಪರಂಪರೆ ಬಗ್ಗೆ ಸಾರಿ ಹೇಳುತ್ತದೆ. ಮೋದಿ ಅವರ ಗುರು ಯಾರು? ಅಡ್ವಾಣಿ. ಮೋದಿ ಅವರು ಚಪ್ಪಲಿಯಿಂದ ಹೊಡೆದು ಅಡ್ವಾಣಿ ಅವರನ್ನು ವೇದಿಕೆಯಿಂದ ಹೊರದಬ್ಬಿದರು’ ಎಂದು ರಾಹುಲ್ ಕಿಡಿಕಾರಿದ್ದಾರೆ.

Modi threw his guru Advani out Says Rahul Gandhi
Author
Maharashtra, First Published Apr 6, 2019, 1:40 PM IST

ಚಂದ್ರಾಪುರ (ಮಹಾರಾಷ್ಟ್ರ): ‘ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ವರಿಷ್ಠ ನೇತಾರ ಎಲ್‌.ಕೆ. ಅಡ್ವಾಣಿ ಅವರನ್ನು ಚಪ್ಪಲಿಯಿಂದ ಹೊಡೆದು ವೇದಿಕೆಯಿಂದ ಹೊರದಬ್ಬಿದರು’ (ಜೂತಾ ಮಾರ್‌ಕೇ ಸ್ಟೇಜ್‌ ಸೇ ಉತಾರಾ) ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದಾರೆ. 

ದಿಗ್ಗಿ ವಿರುದ್ಧ ಅಡ್ವಾಣಿ ಪುತ್ರಿ ಕಣಕ್ಕೆ...?

ಶುಕ್ರವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಹಿಂದು ಧರ್ಮದಲ್ಲಿ ಗುರುವೇ ಶ್ರೇಷ್ಠ. ಅದು ಗುರುಶಿಷ್ಯ ಪರಂಪರೆ ಬಗ್ಗೆ ಸಾರಿ ಹೇಳುತ್ತದೆ. ಮೋದಿ ಅವರ ಗುರು ಯಾರು? ಅಡ್ವಾಣಿ. ಮೋದಿ ಅವರು ಚಪ್ಪಲಿಯಿಂದ ಹೊಡೆದು ಅಡ್ವಾಣಿ ಅವರನ್ನು ವೇದಿಕೆಯಿಂದ ಹೊರದಬ್ಬಿದರು’ ಎಂದು ಕಿಡಿಕಾರಿದರು.

ಮೋದಿಗೆ ರೈಫಲ್‌ ಹಿಡಿಯೋಕೆ ಬರುತ್ತಾ?

ಸರ್ಜಿಕಲ್‌ ದಾಳಿ ಮಾಡಿಸಿದ್ದು ತಾವೇ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಗೆ ಗನ್‌ ಹಿಡಿಯೋಕಾದ್ರೂ ಬರುತ್ತಾ?’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದರು. 

ಬುಧವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್‌, ‘ವಾಯುಪಡೆ ಮಾಡಿದ ಸರ್ಜಿಕಲ್‌ ದಾಳಿಯನ್ನು ತಾವೇ ಮಾಡಿದ್ದೆಂದು ಮೋದಿ ಹೇಳುತ್ತಾರೆ. ರೈಫಲ್‌ ಹಿಡಿಯೋದು ಹೇಗೆಂದು ತೋರಿಸ್ತೀರಾ ಮೋದೀಜಿ? ಸಿಆರ್‌ಪಿಎಫ್‌ ಯೋಧರ ಥರಾ 5 ನಿಮಿಷ ಹಿಡ್ಕೊಳ್ಳಿ ಸಾಕು ಅಥವಾ ಜಮ್ಮು-ಕಾಶ್ಮೀರಕ್ಕೆ ಒಬ್ಬರೇ ಬಸ್ಸಲ್ಲಿ ಹೋಗಿ. ವಾಯುದಾಳಿ ಹೇಗೆ ಮಾಡೋದು ಹೇಳಿ. ನರೇಂದ್ರ ಮೋದಿ ಅವರೇ ವಾಯುದಾಳಿ ಮಾಡಿದ್ರಾ? ಅದೂ ದಿಲ್ಲಿಯ ರೇಸ್‌ಕೋರ್ಸ್‌ ರಸ್ತೆಯ ತಮ್ಮ ಮನೇಲಿ ಕುಳಿತು’ ಎಂದು ಕುಹಕವಾಡಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ
 

Follow Us:
Download App:
  • android
  • ios