- ಹಜ್ ಯಾತ್ರೆ ತೆರಳಬಯಸುವ ಮಹಿಳೆಯರಿಗೆ ಪುರುಷ ರಕ್ಷಕನಿಲ್ಲದೇ ತೆರಳು ಅವಕಾಶ- ಮೋದಿ ಹೇಳಿಕೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ
ಹೊಸದಿಲ್ಲಿ: ಹಜ್ ಯಾತ್ರೆ ಕೈಗೊಳ್ಳಲು ಬಯಸುವ ಮುಸ್ಲಿಮ್ ಮಹಿಳೆಯರು ಯಾವುದೇ ಪುರುಷ ರಕ್ಷಕನಿಲ್ಲದೇ ತೆರಳಬಹುದು, ಎಂದು ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಮನ್ ಕೀ ಬಾತ್‌ನಲ್ಲಿ ಮೋದಿ, 'ಹಜ್ ಯಾತ್ರಾರ್ಥಿಗಳನ್ನು ಚೀಟಿ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಆದರೆ, ಈ ಯಾತ್ರೆ ಕೈಗೊಳ್ಳುವ ಮಹಿಳೆಯರಿಗೆ ಯಾವ ಪುರುಷರ ರಕ್ಷಣೆಯಿಲ್ಲದೆಯೂ ಯಾತ್ರೆ ತೆರಳು ಅವಕಾಶ ಕಲ್ಪಿಸಲಾಗುತ್ತದೆ. ಅವರನ್ನು ಚೀಟಿ ಮೂಲಕ ಆಯ್ಕೆ ಮಾಡುವುದಿಲ್ಲ,' ಎಂದಿದ್ದಾರೆ.
ಮೋದಿ ಹೇಳಿಕೆಯನ್ನು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದ್ದು, 'ಹಜ್ ಮಹಿಳಾ ಯಾತ್ರಿಗಳಿಗೆ ರಕ್ಷಕರನ್ನು ನೀಡುವ ವಿಷಯ ಸಂಪೂರ್ಣ ಧಾರ್ಮಿಕವಾಗಿದ್ದು, ಇದರ ವಿರುದ್ಧ ಕಾನೂನು ರಚಿಸಲು ಯಾರಿಗೂ ಹಕ್ಕಿಲ್ಲ,' ಎಂದು ಹೇಳಿದೆ.
ಎಎನ್‌ಐಯೊಂದಿಗೆ ಮಾತನಾಡಿದ ಮಂಡಳಿಯ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಹಮೀದ್ ಅಜಾರಿ ಮೋದಿ ಹೇಳಿಕೆಯನ್ನು ವಿರೋಧಿಸಿದ್ದಾರೆ.
