‘ಮೋದಿ ಸಿದ್ಧವಿದ್ದರೂ ರಾಜ್ಯ ಬಿಜೆಪಿಗರಿಗೆ ಇದು ಬೇಕಾಗಿಲ್ಲ’

Modi ready to give Money but Karnataka BJP Leaders Rejects: H D Revanna
Highlights

ಸದ್ಯಕ್ಕೆ ಸಾಲ ಮನ್ನಾ ವಿಚಾರದ ಗೊಂದಲಗಳು ಮುಗಿಯುವಂತೆ ಕಾಣುತ್ತಿಲ್ಲ. ರೈತರ ಸಾಲ ಮನ್ನಾ ವಿಚಾರದಲ್ಲಿ ರಾಜ್ಯದ ಸಚಿವರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನ[ಜು.8] ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಹಣ ಕೊಡಲು ಸಿದ್ಧರಿದ್ದಾರೆ. ಆದರೆ ರಾಜ್ಯ ಬಿಜೆಪಿಗರು ಅದಕ್ಕೆ ಅಡ್ಡಗಾಲಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆಯಲ್ಲಿ ಮಾತನಾಡಿ, ಕುಮಾರಸ್ವಾಮಿಗೆ ಹೆಸರು ಬರುತ್ತದೆ ಎಂದು ಮೋದಿ ಹಣಕೊಡಲು ರಾಜ್ಯ ಬಿಜೆಪಿಗರು ಬಿಡುತ್ತಿಲ್ಲ. ಸಾಲಮನ್ನಾದಲ್ಲಿ ಒಕ್ಕಲಿಗೇ ಹೆಚ್ಚು ಲಾಭ ಅಂತಾ ಮಾಧ್ಯಮದಲ್ಲಿ ಬರುತ್ತಿದೆ ಹೇಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಎಲ್ಲ ಪ್ರಶ್ನೆಗಳಿಗೂ ಸದನದಲ್ಲಿ ಕುಮಾರಸ್ವಾಮಿ ಉತ್ತರ ನೀಡಲಿದ್ದಾರೆ ಎಂದರು.

ತಮಿಳುನಾಡಿನವರನ್ನು ಕೇಳಿ ನಾವು ಬೆಳೆಯನ್ನು ಬೆಳೆಯಬೇಕಾ! ರಾಜ್ಯದ ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳಯಬೇಕು ಎಂದು ತಮಿಳುನಾಡಿನವರನ್ನು ಕೇಳಬೇಕಾ? ಎಂದು ಪ್ರಶ್ನೆ ಮಾಡಿದ  ರೇವಣ್ಣ 18 ಲಕ್ಷ ಎಕರೆ ಜಮೀನು ರಾಜ್ಯದ ರೈತರದ್ದು ಎಂದರು.

loader