ಮನ್ ಕೀ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ ಅವರು, ಕರುಣ್ ನಾಯರ್ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸಾಧನೆಯನ್ನಂತೂ ಮನದುಂಬಿ ಪ್ರಶಂಸಿದರು.

ನವದೆಹಲಿ(ಡಿ. 25): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆದ್ದ ಟೀಮ್ ಇಂಡಿಯಾವನ್ನು ಪ್ರಧಾನಿ ಮೋದಿ ಕೊಂಡಾಡಿದರು. ಮನ್ ಕೀ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ ಅವರು, ಕರುಣ್ ನಾಯರ್ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸಾಧನೆಯನ್ನಂತೂ ಮನದುಂಬಿ ಪ್ರಶಂಸಿದರು. ಆರ್.ಅಶ್ವಿನ್ ಅವರ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿಯವರ ನಾಯಕತ್ವವನ್ನೂ ಪ್ರಧಾನಿ ಮೋದಿ ಶ್ಲಾಘಿಸಿದರು.

ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 4-0 ಅಂತರದಿಂದ ಜಯಿಸಿದೆ. ಕರುಣ್ ನಾಯರ್ ತ್ರಿಶತಕ ಸಿಡಿಸಿದರೆ, ಕೆಎಲ್ ರಾಹುಲ್ ಕೇವಲ 1 ರನ್'ನಿಂದ ದ್ವಿಶತಕವಂಚಿತರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಇಡೀ ಸರಣಿಯಲ್ಲಿ ಆರ್.ಅಶ್ವಿನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅಶ್ವಿನ್ ಅವರಿಗೆ ವರ್ಷದ ಐಸಿಸಿ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಕ್ರಿಕೆಟಿಗ ಎಂಬ ಪ್ರಶಸ್ತಿಗಳೂ ಬಂದಿವೆ.

ಇದೇ ವೇಳೆ, 15 ವರ್ಷಗಳ ಬಳಿಕ ಕಿರಿಯರ ವಿಶ್ವ ಕಪ್ ಜಯಿಸಿದ ಭಾರತೀಯ ಹಾಕಿ ಆಟಗಾರರ ಸಾಧನೆಯನ್ನೂ ಪ್ರಧಾನಿ ಮೋದಿ ಶ್ಲಾಘಿಸಿದ್ದು ಗಮನಾರ್ಹ.