ಉಡುಪಿ[ಸೆ.11]: ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಇಂದು ವಿರೋಧಿಸುವವರು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದು ಹೇಳುವ ಮೂಲಕ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

'ಮೋದಿ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸ್ತಿದ್ದಾರೆ'..!

ಉಡುಪಿಯಲ್ಲಿ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುನಿಲ್‌, ಮೋದಿ ಅವರ ನಿಲುವನ್ನು ವಿರೋಧಿಸಿ ಯಾರೋ ಜಿಲ್ಲಾಧಿಕಾರಿಯೊಬ್ಬರು ರಾಜಿನಾಮೆ ನೀಡಿದ್ದಾರೆ. ಅವರು ಕೇಂದ್ರ ಸರ್ಕಾರದ ಕಾಶ್ಮೀರ ಮತ್ತು ರಾಮಮಂದಿರದ ಬಗೆಗಿನ ನಿಲುವು ತಮಗೆ ಇಷ್ಟವಾಗಲಿಲ್ಲ, ಅದಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈಗ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದೆ, ಮುಂದೆ ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರ)ಯನ್ನೂ ಪ್ರವೇಶಿಸುತ್ತೇವೆ. ಆಗ ಈ ಜಿಲ್ಲಾಧಿಕಾರಿ ಮತ್ತು ಇಂತಹ ಮಾನಸಿಕತೆ ಇರುವವರು ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದರು.

ಈ ಮೂಲಕ , ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಸಸಿಕಾಂತ್‌ ಸೆಂಥಿಲ್‌ ಅವರ ಹೆಸರು ಬಳಸದೆ ಎಚ್ಚರಿಕೆ ನೀಡಿದರು.

ಗೊತ್ತಿಲ್ವಾ ಡ್ರ್ಯಾಗನ್ ಬುದ್ಧಿ: ಚೀನಾಗೆ ಪಾಠ ಕಲಿಸಲು ಅದ್ಭುತ ದಾರಿ ಹುಡುಕಿದ ಮೋದಿ!

ಇಡೀ ಜಗತ್ತೇ ಭಾರತದ ಆಡಳಿತವನ್ನು ಒಪ್ಪಿಕೊಂಡಿರುವಾಗ, ಒಬ್ಬ ಜಿಲ್ಲಾಧಿಕಾರಿಯ ರಾಜಿನಾಮೆಯಿಂದ ಬಿಜೆಪಿಯ ವಿಚಾರಧಾರೆಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ಸುನಿಲ್‌ ಸ್ಪಷ್ಟಪಡಿಸಿದರು.