Asianet Suvarna News Asianet Suvarna News

ಗೊತ್ತಿಲ್ವಾ ಡ್ರ್ಯಾಗನ್ ಬುದ್ಧಿ: ಚೀನಾಗೆ ಪಾಠ ಕಲಿಸಲು ಅದ್ಭುತ ದಾರಿ ಹುಡುಕಿದ ಮೋದಿ!

ಪಾಕಿಸ್ತಾನಕ್ಕೆ ಚೀನಾ 1 ಬಿಲಿಯನ್ ಡಾಲರ್ ಆರ್ಥಿಕ ಸಹಾಯ| ಒಂದೇ ದಿನದಲ್ಲಿ ಚೀನಾಗೆ ಪ್ರಧಾನಿ ಮೋದಿಯಿಂದ ಕೌಂಟರ್ ಅಟ್ಯಾಕ್| ಭಾರತ-ನೇಪಾಳ ಅಂತರಾಷ್ಟ್ರೀಯ ಗಡಿ ತೈಲ ಪೈಪ್‌ಲೈನ್ ಯೋಜನೆ ಉದ್ಘಾಟನೆ| ದಕ್ಷಿಣ ಏಷ್ಯಾದ ಮೊಟ್ಟಮ ಮೊದಲ ಅಂತಾರಾಷ್ಟ್ರೀಯ ಪೈಪ್‌ಲೈನ್ ಯೋಜನೆ| 69 ಕಿ.ಮೀ ಉದ್ದದ ಭಾರತ-ನೇಪಾಳ ತೈಲ ಪೈಪ್‌ಲೈನ್ ಯೋಜನೆ|  2 ಮಿಲಿಯನ್ ಮೆಟ್ರಿಕ್ ಟನ್ ತೈಲ ಉತ್ಪಾದನೆ ಗುರಿ| ತೈಲ ಪೈಪ್‌ಲೈನ್ ಯೋಜನೆಗೆ ಭಾರತದಿಂದ 3.24  ಬಿಲಿಯನ್ ರೂ. ಬಂಡವಾಳ ಹೂಡಿಕೆ| ನೇಪಾಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 45 ಮಿಲಿಯನ್ ಯುಎಸ್ ಡಾಲರ್ ಬಂಡವಾಳ ಹೂಡಿಕೆ|

Modi Government Counter China By Inaugurating India-Nepal Oil Pipeline
Author
Bengaluru, First Published Sep 10, 2019, 5:56 PM IST

ಕಠ್ಮಂಡು(ಸೆ.10): ಮುಳ್ಳನ್ನು ಮುಳ್ಳಿಂದ ತೆಗೆಯಬೇಕು ಅಂತಾರೆ. ಹಾಗೇ ಪಾಕಿಸ್ತಾನದ ಮೂಲಕ ಭಾರತವನ್ನು ಕಟ್ಟಿ ಹಾಕುವ ಕಂತ್ರಿ ಬುದ್ಧಿ ಪ್ರದರ್ಶಿಸುವ ಚೀನಾಗೆ ಪಾಠ ಕಲಿಸಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ.

ಪಾಕಿಸ್ತಾನಕ್ಕೆ 1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ಘೋಷಿಸಿರುವ ಚೀನಾ, ಪಾಕ್‌ನಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳುವ ಮೂಲಕ ಭಾರತದ ಚಿಂತೆಯನ್ನು ಹೆಚ್ಚಿಸಿತ್ತು. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿರುವ ಪ್ರಧಾನಿ ಮೋದಿ, ನೇಪಾಳದಲ್ಲಿ ಹೂಡಿಕೆ ಮಾಡುವ ಮೂಲಕ ಚೀನಾ ಆತಂಕವನ್ನು ಹೆಚ್ಚಿಸಿದ್ದಾರೆ.

ನೇಪಾಳದ ಮೇಲೆ ಕಣ್ಣಿಟ್ಟಿರುವ ಚೀನಾ ಮೂಗು ಕೆಂಪು ಮಾಡಿರುವ ಪ್ರಧಾನಿ ಮೋದಿ, ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಅಂತರಾಷ್ಟ್ರೀಯ ಗಡಿ ತೈಲ ಪೈಪ್‌ಲೈನ್ ಯೋಜನೆಯನ್ನು ಉದ್ಘಾಟಿಸಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಕಠ್ಮಂಡುವಿನಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ವಿಡಿಯೋ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಯೋಜನೆಯನ್ನು ಉದ್ಘಾಟಿಸಿದರು.

ದಕ್ಷಿಣ ಏಷ್ಯಾದಲ್ಲಿ ಪ್ರಥಮವಾದ ಭಾರತ-ನೇಪಾಳ ತೈಲ ಪೈಪ್‌ಲೈನ್ ಯೋಜನೆಗೆ ಭಾರತ 3.24  ಬಿಲಿಯನ್ ರೂ. ಬಂಡವಾಳ ಹೂಡಿದೆ. ವರ್ಷಕ್ಕೆ ಸುಮಾರು 2 ಮಿಲಿಯನ್ ಮೆಟ್ರಿಕ್ ಟನ್ ತೈಲ ಉತ್ಪಾದನೆ ಗುರಿ ಹೊಂದಲಾಗಿದೆ. ಇಷ್ಟೇ ಅಲ್ಲದೇ ನೇಪಾಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭಾರತ ಬರೋಬ್ಬರಿ 45 ಮಿಲಿಯನ್ ಯುಎಸ್ ಡಾಲರ್ ಬಂಡವಾಳ ಹೂಡಿದೆ.

ಇದರಿಂದ ತನಗೆ ತೈಲ ಸರಬರಾಜು ಮಾಡುವ ವಿಶ್ವದ ಏಕೈಕ ರಾಷ್ಟ್ರವಾಗಿರುವ ಭಾರತದಿಂದ ಕಡಿಮೆ ದರದಲ್ಲಿ ತೈಲ ಆಮದು ಮಾಡಿಕೊಳ್ಳುವ  ಅವಕಾಶ ನೇಪಾಳಕಕ್ಕೆ ಲಭಿಸಲಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್(IOC) ಮತ್ತು ನೇಪಾಳ ಆಯಿಲ್ ಕಾರ್ಪೋರೇಶನ್(NOC) ಜಂಟಿ ಸಹಭಾಗಿತ್ವದಲ್ಲಿ 69 ಕಿ.ಮೀ ಉದ್ದದ ತೈಲ ಪೈಪ್‌ಲೈನ್ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ.

Follow Us:
Download App:
  • android
  • ios