50 ಮಂದಿ ಉದ್ಯಮಿಗಳ 110000 ಕೋಟಿ ರೂ. ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ನಾನು ಮಾನವಿ ಮಾಡಿದ್ದೆ, ಆದರೆ ಅದರ ಬಗ್ಗೆ ಅವರು ಮೌನ ಪಾಲಿಸಿದ್ದಾರೆ. ಅವರು ಶ್ರೀಮಂತರಿಗೆ ನೆರವು ನೀಡುತ್ತಾರೆಯೇ ಹೊರತು ದೇಶದ ಬಡಜನರಿಗಲ್ಲವೆಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಥುರಾ (ಫೆ.06): ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ, ಪ್ರದಾನಿ ಮೋದಿಯವರನ್ನು ರೈತ-ವಿರೋಧಿ ಎಂದು ಬಣ್ಣಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸದೇ ಪ್ರಧಾನಿ ಮೋದಿ ಕೇವಲ ಶ್ರೀಮಂತ ಉದ್ಯಮಿಗಳಿಗೆ ನೆರವನ್ನು ನೀಡುತ್ತಿದ್ದಾರೆ ಎಂದು ಮಥುರಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.
50 ಮಂದಿ ಉದ್ಯಮಿಗಳ 110000 ಕೋಟಿ ರೂ. ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ನಾನು ಮಾನವಿ ಮಾಡಿದ್ದೆ, ಆದರೆ ಅದರ ಬಗ್ಗೆ ಅವರು ಮೌನ ಪಾಲಿಸಿದ್ದಾರೆ. ಅವರು ಶ್ರೀಮಂತರಿಗೆ ನೆರವು ನೀಡುತ್ತಾರೆಯೇ ಹೊರತು ದೇಶದ ಬಡಜನರಿಗಲ್ಲವೆಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮೋದಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆದರೆ ಇಲ್ಲಿ ಯಾವುದೇ ಉದ್ಯೋಗವಕಾಶಗಳನ್ನು ಅವರು ಸೃಷ್ಟಿಸಿಲ್ಲವೆಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಫೆ.11 ರಿಂದ ಉತ್ತರ ಪ್ರದೇಶ ವಿಧಾನ ಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿವೆ.