Asianet Suvarna News Asianet Suvarna News

ಇನ್ಮುಂದೆ ಕೆಂಪುಗೂಟದ ಕಾರನ್ನು ಪ್ರಧಾನಿ ಬಳಸುವಂತಿಲ್ಲ!

ಪ್ರಮುಖ ವ್ಯಕ್ತಿಗಳು, ಗಣ್ಯರು, ವಿವಿಐಪಿಗಳು ಕೆಂಪುಗೂಟದ ಕಾರನ್ನು ಬಳಸುವ ಸಂಸ್ಕೃತಿಗೆ ತಿಲಾಂಜಲಿ ಇಡಲು ಕೇಂದ್ರ ಸಚಿವ ನಿರ್ಧರಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೊರತುಪಡಿಸಿ ಬೇರಾರೂ ಕೆಂಪುಗೂಟದ ಕಾರನ್ನು ಬಳಸಲು ಅವಕಾಶವಿಲ್ಲ ಎಂದು ಕೇಂದ್ರ ಸಚಿವ ಸಂಪುಟ ಇಂದು ಹೇಳಿದೆ.  ಮೇ.01 ರಿಂದ ಇದು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ.

Modi govt puts an end to red beacon President VP  CJI exempted

ನವದೆಹಲಿ (ಏ.19): ಪ್ರಮುಖ ವ್ಯಕ್ತಿಗಳು, ಗಣ್ಯರು, ವಿವಿಐಪಿಗಳು ಕೆಂಪುಗೂಟದ ಕಾರನ್ನು ಬಳಸುವ ಸಂಸ್ಕೃತಿಗೆ ತಿಲಾಂಜಲಿ ಇಡಲು ಕೇಂದ್ರ ಸಚಿವ ನಿರ್ಧರಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೊರತುಪಡಿಸಿ ಬೇರಾರೂ ಕೆಂಪುಗೂಟದ ಕಾರನ್ನು ಬಳಸಲು ಅವಕಾಶವಿಲ್ಲ ಎಂದು ಕೇಂದ್ರ ಸಚಿವ ಸಂಪುಟ ಇಂದು ಹೇಳಿದೆ.  ಮೇ.01 ರಿಂದ ಇದು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ.

ಪ್ರಧಾನ ಮಂತ್ರಿ ಸೇರಿದಂತೆ ಎಲ್ಲಾ ಸಚಿವರ ಕಾರಿನಿಂದ ಕೆಂಪುಗೂಟವನ್ನು ತೆಗೆದು ಹಾಕಲಾಗಿದೆ. ಈ ಮೂಲಕ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲಾಗಿದೆ. ತುರ್ತು ಸೇವಾ ವಾಹನಗಳಿಗೆ ಮಾತ್ರ ಕೆಂಪು ದೀಪ ಲಭ್ಯವಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಪ್ರಧಾನ ಮಂತ್ರಿ, ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟ ಸಚಿವರು, ಹೈಕೋರ್ಟ್, ಸುಪ್ರೀಂಕೋರ್ಟ್ ಜಡ್ಜ್ ಗಳಿಗೂ ಇದು ಅನ್ಚಯವಾಗಲಿದೆ.

ಕಳೆದ ವಾರವಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಪಂಜಾಬ್ ಮುಖ್ಯಮಂತ್ರಿ ತಮ್ಮ ಕಾರಿನಲ್ಲಿ ಕೆಂಪುದೀಪ ಬಳಸುವುದನ್ನು ಕೈಬಿಟ್ಟಿದ್ದರು.

Follow Us:
Download App:
  • android
  • ios