ನವದೆಹಲಿ: ಜಂಟಿ ಕಾರ್ಯದರ್ಶಿ ಹುದ್ದೆಗೆ ಖಾಸಗಿ ವಲಯದ ತಜ್ಞರನ್ನು ನೇಮಿಸಿಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಉಪ ಕಾರ್ಯದರ್ಶಿಗಳು ಮತ್ತು ನಿರ್ದೇಶಕರ ಹುದ್ದೆಗಳಿಗೂ ಖಾಸಗಿ ವಲಯದ ತಜ್ಞರನ್ನು ನೇಮಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

ಮೋದಿ ಜನಪ್ರಿಯತೆ ಉಳಿಸಿಕೊಳ್ಳುವ ಪಾಠವಿದು

ಸಾಮಾನ್ಯವಾಗಿ ಈ ಹುದ್ದೆಗಳಿಗೆ ಐಎಎಸ್‌ ನಂತಹ ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಆಯ್ಕೆ ಆದವರನ್ನು ಪರಿಗಣಿಸಲಾಗುತ್ತದೆ. ಉಪ ಕಾರ್ಯದರ್ಶಿ ಹಾಗೂ ನಿರ್ದೇಶಕರ ಹುದ್ದೆಗೆ ಖಾಸಗಿ ವಲಯದ ತಜ್ಞರನ್ನು ನೇಮಿಸುವ ಸಲುವಾಗಿ ಅಧಿಕೃತ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿ ಸಿ. ಚಂದ್ರಮೌಳಿ ಸೂಚಿಸಿದ್ದಾರೆ. ಇಂತಹ ಸುಮಾರು 40 ಅಧಿಕಾರಿಗಳನ್ನು ನೇಮಿಸಲುವ ಸಾಧ್ಯತೆ ಇದೆ ಎಂದು ಅಧಿಕರಿಗಳು ತಿಳಿಸಿದ್ದಾರೆ.

ನೂತನ ಸಚಿವರಿಗೆ ಮೋದಿ ನೀತಿಪಾಠ

ಪರೋಕ್ಷ ನೇಮಕಾತಿಯ ಮೂಲಕ ನಿಗದಿತ ಅವಧಿಯ ಗುತ್ತಿಗೆಯ ಆಧಾರದ ಮೇಲೆ ಖಾಸಗಿ ವಲಯದ ತಜ್ಞರನ್ನು ನೇಮಿಸುವ ಅಗತ್ಯವಿದೆ ಎಂದು ಸರ್ಕಾರದ ಚಿಂತಕ ಚಾವಡಿ ನೀತಿ ಆಯೋಗ ಕೂಡ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜಂಟಿ ಕಾರ್ಯದರ್ಶಿಗಳಿಂದ ಹಿಡಿದು ಜಂಟಿ ಕಾರ್ಯದಶಿಗಳ ವರೆಗೆ ತಜ್ಞರನ್ನು ನೇಮಿಸುವುದನ್ನೂ ನೀತಿ ಆಯೋಗ ಪರಿಗಣಿಸಿದೆ. ಈ ಹಿಂದೆ 9 ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಕಳೆದ ವರ್ಷದ ಜೂನ್‌ನಲ್ಲಿ ಸರ್ಕಾರ ಖಾಸಗಿ ವಲಯದ ತಜ್ಞರನ್ನು ನೇಮಿಸಿತ್ತು.