ಪ್ರತಿ ರಫೇಲ್ ಯುದ್ಧವಿಮಾನ ಖರೀದಿಗೆ ₹1100 ಕೋಟಿ ಅಧಿಕ ಹಣ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಫೇಲ್ ಯುದ್ಧವಿಮಾನ ಮೌಲ್ಯ ₹570 ಕೋಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿ ರಫೇಲ್ ಯುದ್ಧವಿಮಾನ ಖರೀದಿಗೆ ₹1100 ಕೋಟಿ ಅಧಿಕ ಹಣ ನೀಡಿ ಖರೀದಿಸುತ್ತಿದೆಯೆಂದು ಕಾಂಗ್ರೆಸ್ ಆರೋಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಫೇಲ್ ತಯಾರಕರ 2016ರ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಫೇಲ್ ಯುದ್ಧವಿಮಾನವೊಂದರ ಖರೀದಿ ಮೌಲ್ಯವು ₹570 ಕೋಟಿ ಆಗಿತ್ತು. ಆದರೆ ಮೋದಿ ಸರ್ಕಾರವು ಅದೇ ರಫೇಲ್ ಯುದ್ಧವಿಮಾನಕ್ಕೆ ₹1670 ಕೋಟಿ ನೀಡಿ ಖರೀದಿಸುತ್ತಿದೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವರದಿಯಲ್ಲಿ ರಕ್ಷಣಾ ಮಂತ್ರಿಯ ಸುಳ್ಳುಗಳು ಬಹಿರಂಗಗೊಂಡಿವೆ. ಕತಾರ್ = 1319 ಕೋಟಿ, ಮೋದಿ=1670 ಕೋಟಿ, ಮನಮೋಹನ್ ಸಿಂಗ್=570 ಕೋಟಿ. 1 ಯುದ್ಧವಿಮಾನಕ್ಕೆ ₹1100 ಕೋಟಿಯಂತೆ ₹36000 ಕೋಟಿ ಜೇಬಿಗೆ (ರಕ್ಷಣಾ ಬಜೆಟ್’ನ ಶೇ.10), ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

Scroll to load tweet…