ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಶ್ವದಲ್ಲೇ ೩ನೇ ಅತಿ ವಿಶ್ವಾಸಾರ್ಹವಾದದ್ದು ಎಂದು ಸಮೀಕ್ಷೆಯೊಂದು ಹೇಳಿದೆ. ಈ ಮೂಲಕ ಮೂಡೀಸ್ ಹಾಗೂ ‘ಪ್ಯೂ’ ಸಮೀಕ್ಷೆಯ ಬಳಿಕ ಮೋದಿ ಸರ್ಕಾರಕ್ಕೆ ಮತ್ತೊಂದು ಶಹಬ್ಬಾಸ್‌ಗಿರಿ ಪ್ರಾಪ್ತಿಯಾಗಿದೆ.

ನವದೆಹಲಿ (ನ.21): ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಶ್ವದಲ್ಲೇ ೩ನೇ ಅತಿ ವಿಶ್ವಾಸಾರ್ಹವಾದದ್ದು ಎಂದು ಸಮೀಕ್ಷೆಯೊಂದು ಹೇಳಿದೆ. ಈ ಮೂಲಕ ಮೂಡೀಸ್ ಹಾಗೂ ‘ಪ್ಯೂ’ ಸಮೀಕ್ಷೆಯ ಬಳಿಕ ಮೋದಿ ಸರ್ಕಾರಕ್ಕೆ ಮತ್ತೊಂದು ಶಹಬ್ಬಾಸ್‌ಗಿರಿ ಪ್ರಾಪ್ತಿಯಾಗಿದೆ.

ಗ್ಯಾಲಪ್ ವರ್ಲ್ಡ್ ಪೋಲ್ ಎಂಬ ಸಂಸ್ಥೆಯೊಂದು ಭಾರತ ದೇಶದ 1000 ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದ್ದು, ಭ್ರಷ್ಟಾಚಾರ ಪ್ರಕರಣಗಳು, ಆರ್ಥಿಕತೆ, ರಾಜಕೀಯ ವಿಚಾರಗಳು ಇತ್ಯಾದಿಗಳನ್ನು ಉಲ್ಲೇಖಿಸಿ, ಸರ್ಕಾರದ ಮೇಲೆ ನಿಮಗೆ ನಂಬಿಕೆ ಎಷ್ಟು ಎಂಬ ಪ್ರಶ್ನೆ ಕೇಳಲಾಗಿತ್ತು. ಅದರಲ್ಲಿ ಶೇ.೭೩ರಷ್ಟು ಜನರು ಸರ್ಕಾರದ ಮೇಲೆ ನಮಗೆ ವಿಶ್ವಾಸವಿದೆ ಎಂದು ಉತ್ತರಿಸಿದ್ದಾರೆ. ಇದೇ ವೇಳೆ, ವಿಶ್ವಾಸಾರ್ಹ ಸರ್ಕಾರಗಳಲ್ಲಿ ಸ್ವಿಜ ರ್ಲೆಂಡ್, ಇಂಡೋನೇಷ್ಯಾ ಮೊದಲ ೨ ಸ್ಥಾನ ಪಡೆದಿವೆ. ಈ ಎರಡೂ ದೇಶಗಳಲ್ಲಿನ ಶೇ.೮೨ ಜನರು ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ಸಮೀಕ್ಷೆಯಲ್ಲಿ ಉತ್ತರಿಸಿ ದ್ದಾರೆ. ಭಾರತದ ನಂತರ ಸ್ಥಾನಗಳಲ್ಲಿ ಲಕ್ಸಂಬರ್ಗ್, ನಾರ್ವೆ, ಕೆನಡಾ, ಟರ್ಕಿ, ನ್ಯೂಜಿಲೆಂಡ್, ಐರ್ಲೆಂಡ್, ಹಾಲೆಂಡ್, ಜರ್ಮನಿ, ಫಿನ್ಲೆಂಡ್, ಸ್ವೀಡನ್ ಇವೆ.