ನವದೆಹಲಿ, (ಜ.7): 2019ರ ಲೋಕಸಭಾ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ. ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ಫೇಸ್‌ಬುಕ್, ಟ್ವಿಟರ್‌ನಲ್ಲಿ ತರೆವಾರಿ ರಿಯಾಕ್ಷನ್‌ಗಳು ಬಂದಿವೆ. ಜಾತಿ ಆಧಾರಿತ ಮೀಸಲಾತಿಗಿಂತ ಇದೆ ಮೇಲು.. ನರೇಂದ್ರ ಮೋದಿ ಅವರಿಂದ ಇಂಥದ್ದೊಂದು ದಿಟ್ಟ ಕ್ರಮ ನಿರೀಕ್ಷೆ ಮಾಡಿದ್ದೆವು. ಮೋದಿ ಸರ್ಕಾರದಿಂದ ಐತಿಹಾಸಿಕ ನಡೆ. ಮೋದಿ ಸರ್ಕಾರದ ಈ ನಡೆಯಿಂದ 2019 ರ ಲೋಕಸಭಾ ಚುನಾವಣೆಯ ದಿಕ್ಕು ಬದಲಾಗಬಹುದು ಎಂಬ ಪ್ರತಿಕ್ರಿಯೆಗಳು ಬಂದಿವೆ.

ಮೇಲ್ಜಾತಿ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ, ಮೋದಿ ಘೋಷಣೆ..!

ಮುಸ್ಲಿಮರು ಸಹ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು 8 ಲಕ್ಷ ರೂ. ಆದಾಯಕ್ಕಿಂತ ಕೆಳಗಿರುವವರು ಈ ವ್ಯಾಪ್ತಿಗೆ ಬರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಒಂದಿಷ್ಟು ಪ್ರತಿಕ್ರಿಯೆ ನೋಡಿಕೊಂಡು ಬನ್ನಿ...