ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3755 ಕೋಟಿ ರು. ಅನ್ನು ಪ್ರಚಾರಕ್ಕಾಗಿ ವೆಚ್ಚ ಮಾಡಿದೆ ಎಂಬ ವಿಚಾರ ಆರ್’ಟಿಐ ಅರ್ಜಿಯಿಂದ ಬಯಲಾಗಿದೆ.
ನವದೆಹಲಿ(ಡಿ.9): ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3755 ಕೋಟಿ ರು. ಅನ್ನು ಪ್ರಚಾರಕ್ಕಾಗಿ ವೆಚ್ಚ ಮಾಡಿದೆ ಎಂಬ ವಿಚಾರ ಆರ್’ಟಿಐ ಅರ್ಜಿಯಿಂದ ಬಯಲಾಗಿದೆ.
ಗ್ರೇಟರ್ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್ವೀರ್ಗೆ ಸರ್ಕಾರ ಈ ಉತ್ತರ ನೀಡಿದೆ. `2014ರ ಏಪ್ರಿಲ್’ನಿಂದ 2017ರ ಅಕ್ಟೋಬರ್’ವರೆಗೂ ವಿದ್ಯುನ್ಮಾನ, ಮುದ್ರಣ ಮತ್ತು ಇತರ ಸಾರ್ವಜನಿಕ ಪ್ರಚಾರದ ಜಾಹೀರಾತಿಗಾಗಿ 3755 ಕೋಟಿ ರು. ವ್ಯಯ ಮಾಡಲಾಗಿದೆ.
ಸಮುದಾಯ ರೇಡಿಯೋ, ಡಿಜಿಟಲ್ ಸಿನಿಮಾ, ದೂರದರ್ಶನ, ಇಂಟನರ್’ನೆಟ್, ಎಸ್ಎಂಎಸ್ ಮತ್ತು ಟೀವಿ ಸೇರಿ ಇತರ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತಿಗೆ 1656 ಕೋಟಿ ರು., ಮುದ್ರಣ ಮಾಧ್ಯಮಗಳ ಜಾಹೀರಾತಿಗಾಗಿ 1698 ಕೋಟಿ, ಪೋಸ್ಟರ್’ಗಳು, ಬುಕ್ಲೆಟ್’ಗಳು, ಕ್ಯಾಲೆಂಡರ್’ಗಳಿಗಾಗಿ 399 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
