ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. ಅಸಂಘಟಿತ ವಲಯದ 48 ಕೋಟಿ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಯೋಜನೆ ಹಾಗೂ ಕಾತರಿ ಕನಿಷ್ಠ ವೇತನ ಕೊಡಿಸಲು ಕಾನೂ ನು ತಿದ್ದುಪಡಿಗೆ ಸಿದ್ಧತೆ ನಡೆಸಿದೆ.
ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಸಾಮಾನ್ಯ ಮತದಾರರನ್ನು ಒಲಿಸಿಕೊಳ್ಳಲು ಕೆಲವು ಕ್ರಮಗಳಿಗೆ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಅಸಂಘಟಿತ ವಲಯದ 48 ಕೋಟಿ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಯೋಜನೆ ಹಾಗೂ ಕಾತರಿ ಕನಿಷ್ಠ ವೇತನ ಕೊಡಿಸಲು ಕಾನೂ ನು ತಿದ್ದುಪಡಿಗೆ ಸಿದ್ಧತೆ ನಡೆಸಿದೆ.
ಕಾರ್ಮಿಕ ಸಚಿವಾಲಯವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಅಸಂಘಟಿತ ವಲ ಯದ ಕಾರ್ಮಿಕರಿಗೆ ಮಾಸಿಕ ಕನಿಷ್ಠ 9,900 ರು. ವೇತನ ನಿಗದಿ ಮಾಡಲು ಮುಂದಾಗಿದೆ. 6 ಕೋಟಿ ಅಸಂಘಟಿತ ನಿವೃತ್ತ ಕಾರ್ಮಿಕರಿಗೆ ಮಾಸಿಕ 3 ಸಾವಿರ ರು. ಪಿಂಚಣಿ ನಿಗದಿ ಮಾಡಲು ‘ವೇತನ ಕಾಯ್ದೆ’ಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇರಿಸಿದೆ.
ಇವರಿಗೆ ಹಾಲಿ 1 ಸಾವಿರ ರು. ಕನಿಷ್ಠ ಮಾಸಿಕ ಪಿಂಚಣಿಯಿದೆ. ‘ಕಳೆದ ಡಿ. 26ರಂದು ನಡೆದ ಸಂಪುಟ ಸಭೆಯಲ್ಲೇ ಈ ಪ್ರಸ್ತಾಪವನ್ನು ಕಾರ್ಮಿಕ ಸಚಿವಾಲಯ ಇರಿಸಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ‘ನಾನೊಮ್ಮೆ ಅಂತಿಮವಾಗಿ ಈ ಯೋಜನೆಯನ್ನು ಪರಿಶೀಲಿಸಬೇಕು’ ಎಂದರು. ಹಾಗಾಗಿ ಜನವರಿ 3 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಚರ್ಚೆ ನಡೆಯಲಿದೆ’ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಈ ಕಾರ್ಮಿಕರಿಗೆ ಕೆಲಸದ ಅವಧಿ ನಿಗದಿ ಮಾಡುವ ಹಾಗೂ ಪ್ರತಿ ತಿಂಗಳ 7 ನೇ ತಾರೀಖಿನ ಒಳಗೆ ಸಂಬಳ ಆಗುವ ಹಾಗೂ ಮಾಸಿಕ ಕನಿಷ್ಠ 1 ರಜೆ ಸಿಗುವ ಅಂಶಗಳೂ ಇವೆ.
ಅಸಂಘಟಿತ ವಲಯದ ಕಾರ್ಮಿಕರು ಯಾರು?: ಜಾಡ ಮಾಲಿಗಳು, ಸೆಕ್ಯೂರಿಟಿ ಗಾರ್ಡ್‌ಗಳು, ವಾಹನ ಚಾಲ ಕರು, ಮನೆಕೆಲಸದ ಆಳುಗಳು, ಕಾರ್ಮಿಕರು, ಇತ್ಯಾದಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 1, 2019, 8:30 AM IST