ಬಿಹಾರದಲ್ಲಿ ಅನಿರೀಕ್ಷಿತ ರಾಜಕಾರಣದಿಂದಾಗಿ ನಿತೀಶ್ ಕುಮಾರ್ ರಾಜಿನಾಮೆ ನೀಡಿ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕಾಂಗ್ರೆಸ್-ಆರ್’ಜೆಡಿಗೆ ಭಾರೀ ಹಿನ್ನಡೆಯಾದರೆ ಬಿಜೆಪಿಗೆ ದೊಡ್ಡ ಗೆಲುವಾಗಿದೆ. ಕಡೆಗೂ ಬಿಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ನವದೆಹಲಿ (ಜು.27): ಬಿಹಾರದಲ್ಲಿ ಅನಿರೀಕ್ಷಿತ ರಾಜಕಾರಣದಿಂದಾಗಿ ನಿತೀಶ್ ಕುಮಾರ್ ರಾಜಿನಾಮೆ ನೀಡಿ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕಾಂಗ್ರೆಸ್-ಆರ್’ಜೆಡಿಗೆ ಭಾರೀ ಹಿನ್ನಡೆಯಾದರೆ ಬಿಜೆಪಿಗೆ ದೊಡ್ಡ ಗೆಲುವಾಗಿದೆ. ಕಡೆಗೂ ಬಿಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ರಾಜಕೀಯ ತಂತ್ರಗಳಿಂದ ಒಂದೊಂದೇ ರಾಜ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿಯೂ ನಾವಿದನ್ನು ಗಮನಿಸಬಹುದು. ಉತ್ತರ ಪ್ರದೇಶ, ಉತ್ತರಖಂಡ, ಗೋವಾ. ಮಣಿಪುರದಲ್ಲಿ ಬಿಜೆಪಿ ಭಾರೀ ಗೆಲುವನ್ನು ಸಾಧಿಸಿದೆ. ಅದೇ ರೀತಿ ಬಿಹಾರದಲ್ಲೂ ತನ್ನ ಪ್ರಾಬಲ್ಯ ಸಾಧಿಸಿದೆ. ದೇಶದಾದ್ಯಂತ ತನ್ನ ಪ್ರಾಬಲ್ಯ ಸಾಧಿಸಿಕೊಳ್ಳುತ್ತಿದೆ ಮೋದಿ ಅಂಡ್ ಟೀಂ ಒಟ್ಟು ದೇಶದ 19 ರಾಜ್ಯಗಳಲ್ಲಿ ಎನ್’ಡಿಎ ಮೈತ್ರಿಕೂಟ ಹಿಡಿತ ಸಾಧಿಸಿದೆ. ಅಚ್ಚರಿಯೆಂಬಂತೆ ಕಾಶ್ಮೀರದಲ್ಲಿಯೂ ಸಹ ಪಿಡಿಪಿಯೊಂದಿಗೆ ಬಿಜೆಪಿ ಮೈತ್ರಿ ಸರ್ಕಾರ ರಚಿಸಿದೆ. ಅದೇ ರೀತಿ ಗುಜರಾತ್’ನಲ್ಲೂ ಬಹುಮತದೊಂದಿಗೆ ಬಿಜೆಪಿ ಅಧಿಕಾರದಲ್ಲಿದೆ.
ಇನ್ನು ಮೋದಿ-ಅಮಿತಾ ಶಾ ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ದೇವೇಗೌಡರ ಜೊತೆಯೂ ಮೋದಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2018 ರಲ್ಲಿ ಕರ್ನಾಟಕದಲ್ಲಿ ಕಮಲ ಅರಳಿಸಲು ಮೋದಿ ಪ್ಲಾನ್ ಮಾಡುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬರಲು ಸ್ಥಾನಗಳ ಕೊರತೆಯಾದರೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಮೋದಿ ಸಿದ್ಧತೆ ನಡೆಸಿದ್ದಾರೆ. ನಿತೀಶ್ ಕುಮಾರ್ ಜೊತೆ ಸ್ನೇಹ ಹಸ್ತ ಚಾಚಿದಂತೆ ಗೌಡರ ಜೊತೆಯೂ ಸ್ನೇಹಹಸ್ತ ಚಾಚುತ್ತಾರಾ ಎನ್ನುವ ಕುತೂಹಲ ದ್ದಿದೆ. ಇದೀಗ ಮೋದಿ-ಅಮಿತ್ ಶಾ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಇಲ್ಲಿ ನಡೆಯುತ್ತಾ ಅವರ ಮೋದಿ ಮೋಡಿ ಎನ್ನುವುದನ್ನು ನೋಡಬೇಕಾಗಿದೆ.
