ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿಯವರ ಜೀವನಾಧಾರಿತ ಕೃತಿ ‘ಬಿಯಾಂಡ್ ದ ಡ್ರೀಮ್ ಗರ್ಲ್’ಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ.

ನವದೆಹಲಿ: ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿಯವರ ಜೀವನಾಧಾರಿತ ಕೃತಿ ‘ಬಿಯಾಂಡ್ ದ ಡ್ರೀಮ್ ಗರ್ಲ್’ಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ.

‘ಸ್ಟಾರ್‌ಡಸ್ಟ್’ನ ಮಾಜಿ ಸಂಪಾದಕ ರಾಮ್‌ಕಮಲ್ ಮುಖರ್ಜಿ ಬರೆದಿರುವ ಈ ಪುಸ್ತಕ ಅ.16ರಂದು ಬಿಡುಗಡೆಯಾಗಲಿದೆ.

ನಟರಿಗೆ ಸಂಬಂಧಿಸಿದ ಪುಸ್ತಕಕ್ಕೆ ಹಾಲಿ ಪ್ರಧಾನಿಯೊಬ್ಬರು ಮುನ್ನುಡಿ ಬರೆದಿರುವುದು ಇದೇ ಮೊದಲು’ ಎಂದು ಮುಖರ್ಜಿ ಹೇಳಿದ್ದಾರೆ.