ಕಪ್ಪು ಹಣ ಕಡಿವಾಣ ಹಾಕಲು ತೆರಿಗೆ ಬದಲಾವಣೆಯ ಅಗತ್ಯವಿದೆ. ಅದು ಬಿಟ್ಟು ನೋಟು ನಿಷೇಧ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುವಂತಾಗಿದೆ. ಕಪ್ಪು ಹಣವಿರುವುದು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬಳಿಯೇ ಹೊರತು ಜನಸಾಮಾನ್ಯರ ಬಳಿಯಲ್ಲ. ಮೋದಿ ಸರ್ಕಾರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಕೊಂಡಯ್ಯ ಹೇಳಿದ್ದಾರೆ.
ಬಳ್ಳಾರಿ (ಡಿ.27): ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಎರಡು ಬಾರಿ ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಕೆ ಸಿ ಕೊಂಡಯ್ಯ ಪ್ರಧಾನಿ ಮೋದಿ ನಡೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪ್ರಧಾನಿ ನರೇಂದ್ರ ಮೋದಿ ಚುನಾವಣೆ ವೇಳೆ ಕಪ್ಪುಹಣವನ್ನು ವಾಪಾಸ್ ತಂದು ಜನರಿಗೆ ನೀಡಲಾಗುವುದು ಎಂದು ಹೇಳಿ ಮೋಸ ಮಾಡಿದ್ದರು. ಇದೀಗ ನೋಟು ನಿಷೇಧ ಮಾಡುವ ಮೂಲಕ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದಾರೆ, ಎಂದು ಅವರು ಹೇಳಿದ್ದಾರೆ.
ಕಪ್ಪು ಹಣ ಕಡಿವಾಣ ಹಾಕಲು ತೆರಿಗೆ ಬದಲಾವಣೆಗೆ ಅಗತ್ಯವಿದೆ. ಅದು ಬಿಟ್ಟು ನೋಟು ನಿಷೇಧ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುವಂತಾಗಿದೆ. ಕಪ್ಪು ಹಣವಿರುವುದು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬಳಿಯೇ ಹೊರತು ಜನಸಾಮಾನ್ಯರ ಬಳಿಯಲ್ಲ. ಮೋದಿ ಸರ್ಕಾರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಕೊಂಡಯ್ಯ ಹೇಳಿದ್ದಾರೆ.
